alex Certify ಬ್ರಿಟನ್​ ಮಣ್ಣಿನಲ್ಲಿ ಪತ್ತೆಯಾಯ್ತು ಡೈನೋಸಾರ್​ಗಳ ಕೊನೆಯ ಕುರುಹು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಿಟನ್​ ಮಣ್ಣಿನಲ್ಲಿ ಪತ್ತೆಯಾಯ್ತು ಡೈನೋಸಾರ್​ಗಳ ಕೊನೆಯ ಕುರುಹು..!

ಬರೋಬ್ಬರಿ 110 ದಶಲಕ್ಷ ವರ್ಷಗಳ ಹಿಂದೆ ಬ್ರಿಟನ್​ ಮಣ್ಣಿನಲ್ಲಿ ಕೊನೆಯ ಬಾರಿಗೆ ನಡೆದ ಡೈನೋಸಾರ್​​ಗಳ ಹೆಜ್ಜೆ ಗುರುತನ್ನ ಸಂಶೋಧಕರ ತಂಡ ಪತ್ತೆ ಮಾಡಿದೆ.

ಕೆಂಟ್​ನ ಫೋಕ್​ಸ್ಟೋನ್​ ಎಂಬಲ್ಲಿ ಕನಿಷ್ಟ ಆರು ವಿಭಿನ್ನ ಡೈನೋಸಾರ್​ ಪ್ರಬೇಧಗಳ ಹೆಜ್ಜೆ ಗುರುತನ್ನ ಈ ತಂಡವು ಪತ್ತೆ ಮಾಡಿದೆ. ಹೇಸ್ಟಿಂಗ್ಸ್ ವಸ್ತು ಸಂಗ್ರಹಾಲಯ ಹಾಗೂ ಆರ್ಟ್​ ಗ್ಯಾಲರಿ ಕ್ಯುರೇಟರ್​ ಮತ್ತು ಫೋರ್ಟ್ಸ್ ಮೌತ್​ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಈ ಶೋಧ ಕಾರ್ಯ ಮಾಡಿದ್ದಾರೆ. ಇದು ಬ್ರಿಟನ್​​ನಲ್ಲಿ ಪತ್ತೆ ಮಾಡಲಾದ ಕೊನೆಯ ಡೈನೋಸಾರ್​ಗಳ ದಾಖಲೆಯಾಗಿದೆ.

ಫೋಲ್ಕ್​ಸ್ಟೋನ್​ ಫಾರ್ಮೆಷನ್​ ಎಂದು ಕರೆಯಲ್ಪಡುವ ಸ್ಥರಗಳಲ್ಲಿ ಇದೇ ಮೊದಲ ಬಾರಿಗೆ ಡೈನೋಸಾರ್​ಗಳ ಹೆಜ್ಜೆ ಗುರುತು ಪತ್ತೆಯಾಗಿದೆ. ಅಳಿವಿನಂಚಿಗೂ ಮುನ್ನ ದೇಶದಲ್ಲಿ ತಿರುಗಾಡಿದ ಡೈನೋಸಾರ್​ಗಳ ಕೊನೆಯ ಕುರುಹು ಇದಾಗಿರಬಹುದು ಎಂದು ಪ್ರೊಫೆಸರ್​ ಡೇವಿಡ್​ ಮಾರ್ಟಿಲ್​ ಹೇಳಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...