alex Certify ಬಾಲಕನ ಭಾವನಾತ್ಮಕ ಪತ್ರ ಹಂಚಿಕೊಂಡ ಇಂಗ್ಲೆಂಡ್ ಫುಟ್‌ಬಾಲ್ ಕ್ಲಬ್: ಅಷ್ಟಕ್ಕೂ ಪತ್ರದಲ್ಲೇನಿದೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಭಾವನಾತ್ಮಕ ಪತ್ರ ಹಂಚಿಕೊಂಡ ಇಂಗ್ಲೆಂಡ್ ಫುಟ್‌ಬಾಲ್ ಕ್ಲಬ್: ಅಷ್ಟಕ್ಕೂ ಪತ್ರದಲ್ಲೇನಿದೆ ಗೊತ್ತಾ..?

ಫುಟ್ಬಾಲ್ ಆಟಗಾರರಿಗೆ ತಮ್ಮದೇ ಆದ ಅಭಿಮಾನಿಗಳ ಬಳಗವಿದೆ. ಅದೆಷ್ಟೋ ಜನ ಫುಟ್ಬಾಲ್ ಆಟವನ್ನು ಹುಚ್ಚೆದ್ದು ನೋಡುತ್ತಾರೆ. ಇದೀಗ ಬ್ರಿಟಿಷ್ ಕ್ಲಬ್ ಗೆ ಬಂದಿರುವ ಪತ್ರದ ಜೊತೆ ಮೂರು ನಾಣ್ಯಗಳು ಅಚ್ಚರಿಗೊಳಗಾಗುವಂತೆ ಮಾಡಿದೆ.

ಆರೂವರೆ ವರ್ಷದ ಬಾಲಕನೊಬ್ಬ ಒಂದು ಕಾಗದದ ಮೇಲೆ ಮೂರು ನಾಣ್ಯಗಳನ್ನು ಅಂಟಿಸಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ಶೈರ್‌ನ ಸ್ವಿಂಡನ್‌ನಲ್ಲಿರುವ ಸ್ವಿಂಡನ್ ಟೌನ್ ಫುಟ್‌ಬಾಲ್ ಕ್ಲಬ್‌ಗೆ  ಮೇಲ್ ಮಾಡಿದ್ದಾನೆ. ಆದರೆ, ಹಣದ ಜತೆ ಬಂದ ಪತ್ರ ಎಲ್ಲರ ಮನ ಒಡೆದಿದೆ. ತನ್ನ ತಾಯಿಗೆ ಆಹಾರಕ್ಕೇ ಹಣವಿಲ್ಲದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದು ಬಾಲಕ ಜೋ ಕ್ಲಬ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾನೆ. ತಾನು ಸ್ವಿಂಡನ್ ಟೌನ್ ಹ್ಯಾರಿ ಮೆಕಿಡ್ಡಿಯನ್ನು ಅಭಿಮಾನಿಯಾಗಿದ್ದು, ಖಂಡಿತಾ ಒಂದು ದಿನ ಬರುವುದಾಗಿ ಪತ್ರದಲ್ಲಿ ಜೋ ತಿಳಿಸಿದ್ದಾನೆ. ಈ ಪತ್ರ ಓದಿದ ಕ್ಲಬ್ ಸದಸ್ಯರು ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಾಲಕ ಯಾರು, ಎಲ್ಲಿಯವನು ಎಂಬುದು ಗೊತ್ತಾಗಿಲ್ಲ. ಹೀಗಾಗಿ ಕ್ಲಬ್ ಟ್ವಿಟ್ಟರ್‌ನಲ್ಲಿ ಬಾಲಕನನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಜನರನ್ನು ಕೇಳಿದೆ.

ಇನ್ನೊಂದು ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷರಾದ ಡೇಲ್ ವಿನ್ಸ್ ಅವರು ಸೋಷಿಯಲ್ ಮೀಡಿಯಾದಲ್ಲಿ ಜೋಗೆ ಪಂದ್ಯದ ನಂತರ ಸ್ವಿಂಡನ್ ಟೌನ್ ಮ್ಯಾಸ್ಕಾಟ್ ಗೆ ಹಣ ನೀಡುವುದಾಗಿ ಬರೆದಿದ್ದಾರೆ. ಈ ಪತ್ರವು ವೈರಲ್ ಆಗುತ್ತಿದ್ದಂತೆ,  ಕ್ಲಬ್ ಜೋ ಮತ್ತು ಆತನ ತಾಯಿಗೆ ಸಹಾಯ ಮಾಡಲು ಮುಂದಾಗಿದೆ.

ಜೋ ಹುಡುಕಲು ಮಾತ್ರವಲ್ಲದೆ ವೇತನಕ್ಕಾಗಿ ಕಷ್ಟಪಡುತ್ತಿರುವ ಕುಟುಂಬಗಳಿಗೆ ಸಹಾಯ ಮಾಡಲು ಕ್ಲಬ್‌ನ ಪ್ರಯತ್ನಗಳನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಜನರು ಈ ಕಾರ್ಯಕ್ಕೆ ಕೊಡುಗೆ ನೀಡಲು ಹಣವನ್ನು ದಾನ ಮಾಡಬಹುದು ಎಂದು ಹೇಳಲಾಗಿದೆ.

— Swindon Town FC (@Official_STFC) February 15, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...