alex Certify ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ ಶುರು ಮಾಡ್ತೇವೆ. ಅದ್ರ ಬದಲು ಕೆಲವೊಂದು ಸುಲಭ ಉಪಾಯಗಳನ್ನು ಅನುಸರಿಸಿ ನಮ್ಮನ್ನು ನಾವು ಒತ್ತಡದಿಂದ ದೂರವಿಟ್ಟುಕೊಳ್ಳಬಹುದು.

ಮೊಬೈಲ್ ಬಂದ್ಮೇಲೆ ಒತ್ತಡ ಜಾಸ್ತಿಯಾಗಿದೆ ಎನ್ನುವವರಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿ ಎಂದು ಕೆಲವರು ಸಲಹೆ ನೀಡ್ತಾರೆ. ಮೊಬೈಲ್ ಸ್ವಿಚ್ ಆಫ್ ಮಾಡುವ ಬದಲು ನಮ್ಮನ್ನು ನಾವು ಸ್ವಿಚ್ ಆಫ್ ಮಾಡುವ ಅಗತ್ಯವಿದೆ. ದಿನದಲ್ಲಿ ಕೆಲವೇ ಕೆಲವು ಸಮಯ ನಮ್ಮನ್ನು ನಾವು ಸ್ವಿಚ್ ಆಫ್ ಮಾಡಿದ್ರೆ ಒತ್ತಡ ಓಡಿ ಹೋಗುತ್ತೆ.

ಕಚೇರಿ ಕೆಲಸದ ಒತ್ತಡ ಅಥವಾ ಬೇರೆ ಒತ್ತಡದ ಬಗ್ಗೆ ಆಲೋಚನೆ ಮಾಡಬೇಡಿ. ಕೆಲ ಸಮಯ ಕಣ್ಣು ಮುಚ್ಚಿ ಸುಮ್ಮನೆ ಕುಳಿತುಕೊಳ್ಳಿ. ಮನಸ್ಸು ಶಾಂತವಾಗಿರಲಿ. ಯಾವುದೇ ಆಲೋಚನೆ ಬರದಂತೆ ನೋಡಿಕೊಳ್ಳಿ. ಮನಸ್ಸು ಯಾವುದೇ ಆಲೋಚನೆ ಮಾಡದೆ ಶಾಂತವಾಗಿರುವುದನ್ನು ಅಭ್ಯಾಸ ಮಾಡಿ.

ಒಂಟಿತನ, ಖಿನ್ನತೆ ನಿಮ್ಮನ್ನು ಕಾಡುತ್ತಿದ್ದರೆ ಒಳ್ಳೆ ಪುಸ್ತಕಗಳನ್ನು ಓದಲು ಶುರು ಮಾಡಿ. ಬರೆಯುವ ಅಭ್ಯಾಸವಿದ್ದರೆ ಅಥವಾ ಚಿತ್ರ ಬಿಡಿಸುವ ಅಭ್ಯಾಸವಿದ್ದರೆ ಅದನ್ನು ಮಾಡಿ.

ಬೆಳಿಗ್ಗೆ ಓಡಲು ಪ್ರಾರಂಭಿಸಿ. ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುವ ಮೂಲಕ, ನಿಮ್ಮ ಮೆದುಳು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತದೆ. ಒತ್ತಡ ನಿಮ್ಮನ್ನು ಕಾಡುವುದಿಲ್ಲ.

ಕಚೇರಿಯ  ವಾರದ ರಜೆಯನ್ನು ಸರಿಯಾಗಿ ಬಳಸಿ. ಈ ದಿನವನ್ನು ‘ಮಿ ಟೈಮ್’ ಎಂದು ಆಚರಿಸಲು ಪ್ರಾರಂಭಿಸಿ. ನೀವು ಬಯಸಿದರೆ ಸ್ನೇಹಿತರೊಂದಿಗೆ ಚಲನಚಿತ್ರ ವೀಕ್ಷಿಸಲು ಹೋಗಬಹುದು ಅಥವಾ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...