alex Certify ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಫಾಲೋ ಮಾಡಿ ಈ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಫಾಲೋ ಮಾಡಿ ಈ ಟಿಪ್ಸ್

ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತ್ತಾರೆ. ಆದರೆ ವಯಸ್ಸು 30ರ ಗಡಿ ದಾಟುತ್ತಿದ್ದಂತೆ ಸೌಂದರ್ಯ ಕಳೆಗುಂದುತ್ತದೆ. ಇದಕ್ಕೆ ನಾವು ಅನುಸರಿಸುವ ಜೀವನ ಪದ್ಧತಿ, ಆಹಾರ, ಮಾಲಿನ್ಯ ಮುಂತಾದವು ಕಾರಣವಾಗಿವೆ. ಹಾಗಾಗಿ ನಿಮ್ಮ ಚರ್ಮದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ.

*ಬಾಡಿ ವಾಶ್ ಮಾಡಲು 2 ಚಮಚ ಬಾಡಿ ವಾಶ್ ಶಾಂಪು ತೆಗೆದುಕೊಂಡು ಅದಕ್ಕೆ 2 ಚಮಚ ಕಾಫಿ ಪುಡಿ ಮಿಕ್ಸ್ ಮಾಡಿ ದೇಹವನ್ನು ವಾಶ್ ಮಾಡಿ. ಇದರಿಂದ ಧೂಳು ಕೊಳೆ ಸಂಪೂರ್ಣವಾಗಿ ಹೋಗುತ್ತದೆ.

*ಟೋನರ್ ಆಗಿ ಗ್ರೀನ್ ಟೀ 1 ಕಪ್, ದಾಳಿಂಬೆ ರಸ 1ಕಪ್ ಸೇರಿಸಿ ಮಿಕ್ಸ್ ಮಾಡಿ ಅದನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿಸಿ ಟೋನರ್ ಆಗಿ ಬಳಸಿ. ಇದನ್ನು ಒಂದು ವಾರ ಬಳಸಿ. ಇದು ಚರ್ಮವನ್ನು ಬಿಗಿಗೊಳಿಸುತ್ತದೆ.

*ಫೇಸ್ ಮಾಯಿಶ್ಚರೈಸರ್ ತಯಾರಿಸಲು ಬೆಣ್ಣೆ 1 ಚಮಚ, ಬಾದಾಮಿ ಎಣ್ಣೆ ¼ ಕಪ್, ವಿಟಮಿನ್ ಇ ಎಣ್ಣೆ ½ ಚಮಚ, ಎಸೆನ್ಷಿಯಲ್ ಆಯಿಲ್ 4 ಹನಿ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...