alex Certify BIG NEWS: ವಿಮಾನದಲ್ಲಿ ಸಹಪ್ರಯಾಣಿಕನಿಂದ ದುರ್ವರ್ತನೆ; ಮಹಿಳೆಗೆ ಲೈಂಗಿಕ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಮಾನದಲ್ಲಿ ಸಹಪ್ರಯಾಣಿಕನಿಂದ ದುರ್ವರ್ತನೆ; ಮಹಿಳೆಗೆ ಲೈಂಗಿಕ ಕಿರುಕುಳ

ಬೆಂಗಳೂರು: ಸಹಪ್ರಯಾಣಿಕನೊಬ್ಬ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಹಿಳೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಂಗನಾಥ್ (50) ಮಹಿಳೆಗೆ ವಿಮಾನದಲ್ಲಿ ಕಿರುಕುಳ ನೀಡಿದ ಪ್ರಯಾಣಿಕ. ಲುಫ್ತಾನ್ಸ್ ಏರ್ ಲೈನ್ಸ್ LH 0754 ವಿಮಾನ ಪ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಈ ವಿಮಾನದಲ್ಲಿ ಆಂಧ್ರ ಪ್ರದೇಶದ ತಿರುಪತಿ ಮೂಲದ ಮಹಿಳೆ ಬೆಂಗಳೂರಿಗೆ ಬರುತ್ತಿದ್ದರು.

ವಿಮಾನ ಪ್ರಯಾಣ ಆರಂಭವಾದ ನಾಲ್ಕು ಗಂಟೆ ಬಳಿಕ ಮಹಿಳೆ ತನ್ನ ಸೀಟ್ ನಂ 38Kಯಲ್ಲಿ ನಿದ್ದೆಗೆ ಜಾರಿದ್ದರು. ಮಹಿಳೆಯ ಸೀಟ್ ನ ಪಕ್ಕದ ಸೀಟ್ ನಂ 38J ನಲ್ಲಿ ಕುಳಿತಿದ್ದ ಸಹಪ್ರಯಾಣಿಕ ರಂಗನಾಥ್ ತಡರಾತ್ರಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಅದಾದ ಬಳಿಕ ಮತ್ತೆ ಮಧ್ಯರಾತ್ರಿ 12 ಗಂಟೆ ವೇಳೆಯಲ್ಲಿಯೂ ಸಹಪ್ರಯಾಣಿಕ ರಂಗನಾಥ್ ಮಹಿಳೆಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ವಿಮಾನ ಸಿಬ್ಬಂದಿಗಳನ್ನು ಕರೆದು ವಿಷಯ ತಿಳಿಸಿದ್ದಾರೆ.

ಬಳಿಕ ಮಹಿಳೆ ಬೇರೆ ಸೀಟ್ ನಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ವಿಮಾನ ಕೆಐಎ ನಲ್ಲಿ ಲ್ಯಾಂಡ್ ಆದ ಬಳಿಕ ಮಹಿಳೆ ವಿಮಾನ ನಿಲ್ದಾಣ ಠಾಣೆಯಲ್ಲಿ ರಂಗನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...