alex Certify ತ್ರಿವರ್ಣ ಧ್ವಜಾರೋಹಣ ಮಾಡಿದ ಹಿಜ್ಬುಲ್ ಭಯೋತ್ಪಾದಕನ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತ್ರಿವರ್ಣ ಧ್ವಜಾರೋಹಣ ಮಾಡಿದ ಹಿಜ್ಬುಲ್ ಭಯೋತ್ಪಾದಕನ ತಂದೆ

ಭಾರತೀಯ ಸಶಸ್ತ್ರ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿ ತಂದೆ ಮುಜಫ್ಫರ್‌ ವಾನಿ ಜಮ್ಮು & ಕಾಶ್ಮೀರದ ತ್ರಾಲ್‌ನಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.

ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯರಾದ ಮುಜಫ್ಫರ್‌‌ ಸ್ವತಂತ್ರ ದಿನಾಚರಣೆ ಪ್ರಯುಕ್ತ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.
ಭಾರತ ಗಣರಾಜ್ಯದ ಧ್ವಜವನ್ನು ಹಾರಿಸುವುದು ಇಷ್ಟವಿಲ್ಲ ಎಂದು ತಾನೆಂದೂ ಹೇಳಿಲ್ಲ ಎಂದು ವದಂತಿಗಳಿಗೆ ಮುಜಫ್ಫರ್‌ ಸ್ಪಷ್ಟನೆ ಕೊಟ್ಟಿದ್ದಾರೆ.

ಮೈ ಜುಮ್ಮೆನ್ನಿಸುತ್ತೆ ಹುಲಿಗಳಿಗೆ ಬಾಟಲ್ ಫೀಡಿಂಗ್ ಮಾಡುತ್ತಿರುವ ವಿಡಿಯೋ

ಸ್ವತಂತ್ರ‍್ಯದ ಅಮೃತಮಹೋತ್ಸವದ ಪ್ರಯುಕ್ತ ಎಲ್ಲಾ ಸರ್ಕಾರೀ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಆಡಳಿತ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಹಿಜ್ಬುಲ್ ಮುಜಾಹಿದೀನ್‌ ಪೋಸ್ಟರ್‌ಬಾಯ್ ಆಗಿ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುತ್ತಿದ್ದ ಬುರ್ಹಾನ್‌ನನ್ನು 2016ರಲ್ಲಿ ಸಶಸ್ತ್ರ ಪಡೆಗಳು ಕೊಂದುಹಾಕಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...