alex Certify ಮಾವನ ಪ್ರೀತಿಗೆ ಬಿದ್ದ ಸೊಸೆ….! ಓಡಿ ಹೋಗಿ ಮದುವೆಯಾದವರ ಕೈನಲ್ಲೊಂದು ಮಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾವನ ಪ್ರೀತಿಗೆ ಬಿದ್ದ ಸೊಸೆ….! ಓಡಿ ಹೋಗಿ ಮದುವೆಯಾದವರ ಕೈನಲ್ಲೊಂದು ಮಗು

father in law weds daughter in law after her divorce with his son

ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಾವನಿಗೆ ಸೊಸೆ ಮೇಲೆ ಪ್ರೀತಿ ಚಿಗುರಿದೆ. ಸೊಸೆ ಕೂಡ ಇದಕ್ಕೆ ಸೈ ಎಂದಿದ್ದರಿಂದ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಎರಡು ವರ್ಷದ ನಂತ್ರ ಮಗುವಿನೊಂದಿಗೆ ಮನೆಗೆ ಬಂದಿದ್ದಾರೆ.

ಈ ಪ್ರಕರಣವು ಬಡೌನ್‌ನ ಬಿಸೌಲಿ ಕೊತ್ವಾಲಿ ಪ್ರದೇಶದ ದಬ್ಥರಾ ಹಳ್ಳಿಯಲ್ಲಿ ನಡೆದಿದೆ. ಮಹಿಳೆಯ ಮಾಜಿ ಪತಿ, ಪೊಲೀಸರಿಗೆ ದೂರು ನೀಡಿದ್ದಾರೆ. ಪಂಜಾಯತ್ ನಲ್ಲಿಯೂ ಈ ಬಗ್ಗೆ ವಿಚಾರಣೆ ನಡೆದಿದೆ. ಮಾವ-ಸೊಸೆ ಇಬ್ಬರು ಒಟ್ಟಿಗೆ ವಾಸಿಸಲು ಪಂಚಾಯತ್ ಕೂಡ ಅನುಮತಿ ನೀಡಿದ್ದಾರೆ.

ಮೊದಲ ಮದುವೆ ವೇಳೆ ಹುಡುಗಿ ಅಪ್ರಾಪ್ತೆಯಾಗಿದ್ದಳಂತೆ. ಮೊದಲ ಪತಿಗೆ ಮಹಿಳೆ ವಿಚ್ಛೇದನ ನೀಡಿದ್ದಳಂತೆ. ನಂತ್ರ ಮಾವನನ್ನು ಮದುವೆಯಾಗಿದ್ದಾಳೆ. ಹಾಗಾಗಿ ಇವರಿಬ್ಬರ ಮದುವೆಗೆ ಪೊಲೀಸರೂ ಒಪ್ಪಿಗೆ ನೀಡಿದ್ದರು. ಸೊಸೆ ಮದುವೆಯಾದ ವ್ಯಕ್ತಿ ಹೆಸರು ದೇವೆಂದ್ರ. ಆತನ ವಯಸ್ಸು 45 ವರ್ಷ. ಮದುವೆಯಾದ 6 ತಿಂಗಳ ನಂತರ, ಮಹಿಳೆ ಮತ್ತು ಆಕೆಯ ಮಾಜಿ ಪತಿಯ ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಮಾವನೊಂದಿಗೆ ಆಪ್ತತೆ ಹೆಚ್ಚಾಗಿತ್ತು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಮದುವೆಗೆ ನಿರ್ಧರಿಸಿದ ಸೊಸೆ, ಪತಿಗೆ ವಿಚ್ಛೇದನ ನೀಡಿದ್ಲು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...