alex Certify SHOCKING: ವಿಡಿಯೋ ಕಾಲ್ ನಲ್ಲಿ ಪ್ರಿಯಕರ ನೀಡಿದ ಸೂಚನೆಯಂತೆ ತಾಯಿ ಕೊಂದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ವಿಡಿಯೋ ಕಾಲ್ ನಲ್ಲಿ ಪ್ರಿಯಕರ ನೀಡಿದ ಸೂಚನೆಯಂತೆ ತಾಯಿ ಕೊಂದ ಬಾಲಕಿ

ಫರಿದಾಬಾದ್: 16 ವರ್ಷದ ಹುಡುಗಿಯೊಬ್ಬಳು 18 ವರ್ಷದ ಗೆಳೆಯನ ಸಹಾಯದಿಂದ ತಾಯಿಯನ್ನು ಕೊಂದ ಘಟನೆ ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕನೊಂದಿಗೆ ಸಂಬಂಧ ಮುಂದುವರೆಸಲು ತಾಯಿ ವಿರೋಧಿಸಿದ್ದರಿಂದ ಅಸಮಾಧಾನಗೊಂಡಿದ್ದ ಬಾಲಕಿ ತಾಯಿಯನ್ನು ಕೊಲೆ ಮಾಡಿದ್ದಾಳೆ. ಜುಲೈ 10, 11 ರ ಮಧ್ಯರಾತ್ರಿ ಕೊಲೆ ನಡೆದಿದೆ. ವಿಡಿಯೋ ಕಾಲ್ ಮೂಲಕ ಗೆಳೆಯನ ಸಲಹೆ ಪಡೆದುಕೊಂಡ ಹುಡುಗಿ ತಾಯಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಮಹಿಳೆಯ ಪುತ್ರ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿಗೆ ನಿದ್ದೆ ಮಾತ್ರೆ ಕೊಟ್ಟಿದ್ದ ಬಾಲಕಿ ಗೆಳೆಯ ವಿಡಿಯೋ ಕಾಲ್ ಮಾಡಿ ಸೂಚನೆ ನೀಡಿದಂತೆ ತಾಯಿಯನ್ನು ಕೊಲೆ ಮಾಡಿದ್ದಾಳೆ. ಯುವಕನನ್ನು ಫರಿದಾಬಾದ್ ಜೈಲಿಗೆ ಕಳುಹಿಸಲಾಗಿದ್ದು, ಬಾಲಕಿಯನ್ನು ಬಾಲಾಪರಾಧಿಗಳ ತಾಣಕ್ಕೆ ಕಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...