alex Certify ನಕಲಿ ಸಂದೇಶದ ಕುರಿತು ವಿ.ವಿ. ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಎಚ್ಚರಿಕೆ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಕಲಿ ಸಂದೇಶದ ಕುರಿತು ವಿ.ವಿ. ವಿದ್ಯಾರ್ಥಿಗಳಿಗೆ ಯುಜಿಸಿಯಿಂದ ಎಚ್ಚರಿಕೆ ಸಂದೇಶ

ಕೋವಿಡ್-19 ಕಾರಣದಿಂದಾಗಿ ದೇಶದ ಎಲ್ಲಾ ವಿವಿಗಳಲ್ಲೂ ಆಫ್ಲೈನ್ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಈ ಸಂದೇಶ ಸುಳ್ಳು ಎಂದಿದೆ.

ಮಹತ್ವದ ಪ್ರಕಟಣೆಯೊಂದನ್ನು ಹಂಚಿಕೊಂಡ ಯುಜಿಸಿ, ಟ್ವಿಟರ್‌ನಲ್ಲಿ ಬಿತ್ತರಗೊಂಡಿರುವ ಸಾರ್ವಜನಿಕ ಸೂಚನೆ ನಕಲಿಯಾಗಿದೆ ಮತ್ತು ಅಂತಹ ಯಾವುದೇ ಸೂಚನೆಯನ್ನು ಅಧಿಕೃತವಾಗಿ ಹೊರಡಿಸಿಲ್ಲ ಎಂದು ತಿಳಿಸಿದೆ.

ಚಾಕ್ಲೇಟ್ ಪ್ರಿಯರಿಗೆ ಶುಭ ಸುದ್ದಿ: ‘ಡಾರ್ಕ್ ಚಾಕ್ಲೇಟ್’ ತಿನ್ನಿ, ಖಿನ್ನತೆಯಿಂದ ದೂರವಿರಿ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ನೋಟೀಸ್‌ನಲ್ಲಿ, “ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವುದರಿಂದ, ತಂತಮ್ಮ ತವರು ಕೇಂದ್ರಗಳಲ್ಲಿ ಭೌತಿಕ ಅಂತರವನ್ನು ಕಾಯ್ದುಕೊಂಡು ಆಫ್‌ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು” ಎಂದು ಹೇಳಲಾಗಿದೆ.

ಈ ಮೂಲಕ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಪ್ರಸ್ತುತ ಮತ್ತು ಭವಿಷ್ಯದ ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳನ್ನು ಆಫ್‌ಲೈನ್ ಮೋಡ್‌ನಲ್ಲಿ ತಮ್ಮ ತವರು ಕೇಂದ್ರಗಳಲ್ಲಿ ನಡೆಸಲು ಸಲಹೆ ನೀಡಲಾಗಿದೆ. ಆಫ್‌ಲೈನ್ ಮೋಡ್‌ನಲ್ಲಿ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಗಾಗಿ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ವಿನಂತಿಸಲಾಗಿದೆ”ಎಂದು ಹೇಳುವ ಮೂಲಕ ಈ ನಕಲಿ ಸುತ್ತೋಲೆಯನ್ನು ಮುಕ್ತಾಯಗೊಳಿಸಲಾಗಿದೆ.

ನಕಲಿ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ ಯುಜಿಸಿ “ವಿಶ್ವವಿದ್ಯಾಲಯ ಅನುದಾನ ಆಯೋಗವು ಅಂತಹ ಯಾವುದೇ ಸೂಚನೆಯನ್ನು ನೀಡಿಲ್ಲ,” ಎಂದು ಟ್ವೀಟ್ ಮಾಡಿದೆ.

ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿರುವ ಹಿನ್ನೆಲೆಯಲ್ಲಿ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ (ಜಿಜಿಎಸ್‌ಐಪಿಯು) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ನಂತಹ ವಿಶ್ವವಿದ್ಯಾಲಯಗಳು ಫೆಬ್ರವರಿ 7, 2022 ರಿಂದ ಅನೇಕ ವಿಭಾಗಗಳಾದ್ಯಂತ ಆಫ್‌ಲೈನ್ ತರಗತಿಗಳನ್ನು ಪುನರಾರಂಭಿಸಿವೆ. ಕೋವಿಡ್-19 ಮಾರ್ಗಸೂಚಿಗಳ ಕಟ್ಟುನಿಟ್ಟಾದ ಅನುಸರಣೆಯೊಂದಿಗೆ, ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಬೋಧನೆ ಮತ್ತು ಕಲಿಕಾ ಚಟುವಟಿಕೆಗಳು ಆಫ್‌ಲೈನ್ ಮೋಡ್‌ನಲ್ಲಿ ಪುನರಾರಂಭಗೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...