alex Certify ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ಸಮಯಪ್ರಜ್ಞೆಯಿಂದ ತಪ್ಪಿದೆ ದೊಡ್ಡ ದುರಂತ

ಜಾತ್ರೆಗಳಲ್ಲಿ ಕಾಣಸಿಗುವ ತೂಗುವ ತೊಟ್ಟಿಲಿನಲ್ಲಿ ಕೂರುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಯವಾದ್ರೂ ಕೂಡ ಅರಚುತ್ತಾ, ಕಿರುಚುತ್ತಾ ತೂಗುವ ತೊಟ್ಟಿಲಿನಲ್ಲಿ ಕೂತು ಜನರು ಎಂಜಾಯ್ ಮಾಡುತ್ತಾರೆ. ಆದ್ರೆ, ಇನ್ಮೊಂದೆ ಇವುಗಳಲ್ಲಿ ಕೂರುವ ಮುನ್ನ ಹುಷಾರ್ ಆಗಿರಿ.

ಇಲ್ಲೊಂದೆಡೆ ಮ್ಯಾಜಿಕ್ ಕಾರ್ಪೆಟ್ ನಲ್ಲಿ ಜನರು ಕೂತು ಎಂಜಾಯ್ ಮಾಡುತ್ತಿರಬೇಕಾದರೆ ಏಕಾಏಕಿ ಅದರ ವೇದಿಕೆ ನೆಲದಿಂದ ಮೇಲಕ್ಕೆದ್ದಿರುವ ಆಘಾತಕಾರಿ ಘಟನೆ ನಡೆದಿದೆ.

ಟ್ರೋಫಿ ಗೆದ್ದ ಸಂತಸದಲ್ಲಿ ಆನಂದಭಾಷ್ಪ ಸುರಿಸಿದ ಮೆಸ್ಸಿ

ಮಿಚಿಗನ್ ನಲ್ಲಿ ಮ್ಯಾಜಿಕ್ ಕಾರ್ಪೆಟ್ ಸವಾರಿಯ ಅಸಮರ್ಪಕ ಕಾರ್ಯನಿರ್ವಹಣೆಯು ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿತ್ತು. ಮ್ಯಾಜಿಕ್ ಕಾರ್ಪೆಟ್ ತೂಗುತ್ತಿರುವಾಗಲೇ ಏಕಾಏಕಿ ಅದರ ವೇದಿಕೆ ಮೇಲಕ್ಕೆತ್ತಲು ಪ್ರಾರಂಭಿಸಿತು. ಇದನ್ನು ಗಮನಿಸಿದ ಅಲ್ಲಿದ್ದವರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಆದುದರಿಂದ ಅದೃಷ್ಟವಶಾತ್ ಆಗಬಹುದಾಗಿದ್ದ ಅಪಾಯ ತಪ್ಪಿತು. ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ ಎಂದು ಹೇಳಲಾಗಿದೆ.

ಈ ಘಟನೆ ನಡೆದಿದ್ದು ಮಿಚಿಗನ್ ಟ್ರಾವೆರ್ಸ್ ನಗರದಲ್ಲಿ ನಡೆದ ರಾಷ್ಟ್ರೀಯ ಚೆರ್ರಿ ಉತ್ಸವದಲ್ಲಿ. ಮ್ಯಾಜಿಕ್ ಕಾರ್ಪೆಟ್ ಸವಾರಿಯ ಅಸಮರ್ಪಕ ಕಾರ್ಯನಿರ್ವಹಣೆಯ ಪರಿಣಾಮವಾಗಿ ವೇದಿಕೆಯು ನೆಲದಿಂದ ಮೇಲಕ್ಕೆತ್ತಲು ಪ್ರಾರಂಭಿಸಿತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...