alex Certify ಅಶ್ಲೀಲ ವಿಡಿಯೋ ಪ್ರಕರಣ: ಸುಳ್ಳು ಹೇಳಿ ನನ್ನ ಗುಪ್ತಾಂಗದ ವಿಡಿಯೋ ಚಿತ್ರಿಕರಿಸಲಾಗಿತ್ತು ಎಂದ ಮಾಡೆಲ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ಪ್ರಕರಣ: ಸುಳ್ಳು ಹೇಳಿ ನನ್ನ ಗುಪ್ತಾಂಗದ ವಿಡಿಯೋ ಚಿತ್ರಿಕರಿಸಲಾಗಿತ್ತು ಎಂದ ಮಾಡೆಲ್..​..!

ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬುಧವಾರ ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ಪೊಲೀಸರಿಗೆ ಈ ಯುವತಿ ನೀಡಿದ ಹೇಳಿಕೆಯಲ್ಲಿ, ಆಕೆಗೆ ಕೆಲವು ದೃಶ್ಯಗಳನ್ನು ಮಾತ್ರ ಚಿತ್ರಿಕರಿಸೋದಾಗಿ ಹೇಳಲಾಗಿತ್ತು. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ಆಕೆಯ ಗುಪ್ತಾಂಗಗಳನ್ನು ಚಿತ್ರೀಕರಿಸೋದಿಲ್ಲ ಎಂದು ಹೇಳಿದ್ದರು. ಇದಕ್ಕಾಗಿ ಆಕೆ ಒಪ್ಪಿಗೆ ನೀಡಿದ್ದಳು.

ಈ ಶೂಟಿಂಗ್​​ಗಾಗಿ ಆಕೆಗೆ ಕೆಲ ಸಾವಿರ ರೂಪಾಯಿ ಸಂಭಾವನೆಯನ್ನೂ ನೀಡಲಾಗಿತ್ತು. ಇದಾಗಿ ಸ್ವಲ್ಪ ದಿನಗಳ ಬಳಿಕ ಆಕೆಯ ಸ್ನೇಹಿತರು ಆಕೆಗೆ ಕರೆ ಮಾಡಿ ನಿನ್ನ ಅಶ್ಲೀಲ ವಿಡಿಯೋ ಹಾಟ್​ಶಾಟ್​ ಆಪ್​ನಲ್ಲಿ ಲಭ್ಯವಿದೆ ಎಂದು ಹೇಳಿದ್ದರು. ಇದಾದ ಬಳಿಕವೇ ಆಕೆಗೆ ಯಾವುದೇ ಎಡಿಟ್​ ಮಾಡದೇ ಆಕೆಯ ಗುಪ್ತಾಂಗಗಳ ವಿಡಿಯೋಗಳನ್ನೆಲ್ಲ ಹರಿಬಿಟ್ಟಿರೋದು ತಿಳಿದಿದೆ.

ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು

ಸಾಕ್ಷ್ಯ ಸಂಗ್ರಹದ ಜೊತೆಯಲ್ಲಿ ಪೊಲೀಸರು ಹಾಟ್​ಶಾಟ್​​ ಆ್ಯಪ್​ನ ಆದಾಯ ಹಾಗೂ ರಾಜ್​​ ಕುಂದ್ರಾ ಬ್ಯಾಂಕ್​ ಖಾತೆಗಳ ನಡುವಿನ ಲಿಂಕ್​ನ್ನು ಜಾಲಾಡುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರಿಗೆ ಕೆಲ ಅಡೆತಡೆಗಳು ಉಂಟಾಗುತ್ತಿದೆ. ಆದಾಯದ ಹಣ ಕುಂದ್ರಾ ಖಾತೆಗೆ ಯಾವ ಮಾರ್ಗದಲ್ಲಿ ಹೋಗುತ್ತಿತ್ತು ಅನ್ನೋದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಮುಂಬೈ ಪೊಲೀಸರು ಇಲ್ಲಿಯವರೆಗೆ ಹಾಟ್​ಶಾಟ್​ ಆದಾಯವು ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಯ ವೈಯಕ್ತಿಕ ಖಾತೆಗೆ ಸಂದಾಯವಾಗಿರೋದ್ರ ಬಗ್ಗೆ ಯಾವುದೇ ಪುರಾವೆಯನ್ನು ಪತ್ತೆ ಮಾಡಿಲ್ಲ. ಇದು ಮಾತ್ರವಲ್ಲದೇ ಹಾಟ್​ ಶಾಟ್​ನ ಆದಾಯ ಹಾಗೂ ರಾಜ್​ಕುಂದ್ರಾ ದಂಪತಿಯ ಯಾವುದೇ ಬ್ಯಾಂಕ್​ ಖಾತೆಯ ಜೊತೆ ಸಂಪರ್ಕ ಇರೋದು ಇಲ್ಲಿಯವರೆಗೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಬ್ರಿಟನ್​ ಮೂಲದ ಬಂಧಿತ ಪ್ರದೀಪ್​ ಬಕ್ಷಿ ಹಾಟ್​ಶಾಟ್​​ನ ಆರ್ಥಿಕ ವ್ಯವಹಾರಗಳನ್ನ ನೋಡಿಕೊಳ್ತಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...