alex Certify ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು

ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಪುರಿ ಜಗನ್ನಾಥ ದೇಗುಲವು ಆಗಸ್ಟ್​​ 15ರಿಂದ ಸ್ಥಳೀಯರಿಗೆ ಹಾಗೂ ಆಗಸ್ಟ್​ 23ರಿಂದ ಅನ್ಯ ಭಕ್ತಾದಿಗಳಿಗೆ ತೆರೆಯಲಿದೆ. ಭಕ್ತಾದಿಗಳಿಗೆ ಕೊರೊನಾ ಸೋಂಕು ತಗುಲದಂತೆ ದೇಗುಲದ ಆಡಳಿತ ಮಂಡಳಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ.

ಭಕ್ತಾದಿಗಳಿಗೆ ದೇಗುಲವು ಬೆಳಗ್ಗೆ 7ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆಯಲಿದೆ.

ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಆಡಳಿತ ಮಂಡಳಿ ಆರ್​ಟಿ-ಪಿಸಿಆರ್​ ನೆಗೆಟಿವ್​ ರಿಪೋರ್ಟ್​ ಅಥವಾ ಕೊರೊನಾ 2 ಡೋಸ್​ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಿದೆ. ಇನ್ನುಳಿದಂತೆ ಮಾಸ್ಕ್​ ಬಳಕೆ ಹಾಗೂ ಸಾಮಾಜಿಕ ಅಂತರವು ಕಡ್ಡಾಯವಾಗಿದೆ.

2 ಡೋಸ್​ ಲಸಿಕೆ ಪಡೆದ ಭಕ್ತಾದಿಗಳು ಲಸಿಕೆ ಪ್ರಮಾಣ ಪತ್ರ ಹಾಗೂ ಒಂದು ಡೋಸ್​ ಅಥವಾ ಲಸಿಕೆಯನ್ನೇ ಪಡೆಯದ ಭಕ್ತಾದಿಗಳು 96 ಗಂಟೆಯೊಳಗಿನ ಆರ್​ಟಿ-ಪಿಸಿಆರ್​ ನೆಗೆಟಿವ್​ ರಿಪೋರ್ಟ್ ಹೊಂದಿರೋದು ಕಡ್ಡಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...