alex Certify ಆಗಸ್ಟ್​ ತಿಂಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದ ಕೊರೊನಾ ಸೋಂಕು…..! 3ನೇ ಅಲೆ ಮುನ್ಸೂಚನೆ ಎಂದ ಬಿಎಂಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್​ ತಿಂಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬಂದ ಕೊರೊನಾ ಸೋಂಕು…..! 3ನೇ ಅಲೆ ಮುನ್ಸೂಚನೆ ಎಂದ ಬಿಎಂಸಿ

ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು ಎಂಬ ತಜ್ಞರ ಮುನ್ಸೂಚನೆಯ ಬೆನ್ನಲ್ಲೇ ಮುಂಬೈ ಮಹಾನಗರ ಪಾಲಿಕೆ ಮಕ್ಕಳ ಮೇಲೆ ಕೋವಿಡ್​ ಸೋಂಕಿನ ಬಗ್ಗೆ ಹೆಚ್ಚಿನ ಗಮನ ನೆಟ್ಟಿದೆ. ಕಳೆದ ತಿಂಗಳು ಹಾಗೂ ಈ ತಿಂಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಮಕ್ಕಳ ಸಂಖ್ಯೆಯ ಮೇಲೆ ಅಧ್ಯಯನ ನಡೆಸಲಾಗ್ತಿದೆ.

ಬಿಎಂಸಿ ನೀಡಿರುವ ಮಾಹಿತಿಯ ಪ್ರಕಾರ ಆಗಸ್ಟ್​ 15ರವರೆಗೆ ಮುಂಬೈನಲ್ಲಿ 18 ವರ್ಷದೊಳಗಿನ 365 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ನಗರದ ಒಟ್ಟು ಪ್ರಕರಣದಲ್ಲಿ ಈ ಪಾಲು 9 ಪ್ರತಿಶತವಾಗಿದೆ.

ಬಿಎಂಸಿ ಮೂಲಗಳ ಪ್ರಕಾರ ಜುಲೈನಲ್ಲಿ ಅಪ್ರಾಪ್ತರಲ್ಲಿ ಕೊರೊನಾ ಸೋಂಕು 5 ಪ್ರತಿಶತವಿದ್ದರೆ ಆಗಸ್ಟ್​ ಮಧ್ಯಭಾಗದಲ್ಲಿ ಈ ಪ್ರಮಾಣ 4 ಪ್ರತಿಶತ ಏರಿಕೆ ಕಂಡಿದೆ.

ಬಿಎಂಸಿ ಮಾಹಿತಿ ಪ್ರಕಾರ ಅಪ್ರಾಪ್ತರಲ್ಲಿ 91 ಪ್ರತಿಶತ ಕೊರೊನಾ ಪ್ರಕರಣಗಳು ಬಿಲ್ಡಿಂಗ್​ನಲ್ಲಿ ವಾಸಿಸುವರಲ್ಲಿ ಹಾಗೂ 9 ಪ್ರತಿಶತ ಸ್ಲಂ ಹಾಗೂ ವಠಾರ ವಾಸಿಗಳಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಕೊರೊನಾ ಸೋಂಕಿಗೆ ತುತ್ತಾದ ಅಪ್ರಾಪ್ತರಲ್ಲಿ 12 ರಿಂದ 18 ವರ್ಷ ಪ್ರಾಯದವರೇ ಹೆಚ್ಚಿದ್ದಾರೆ. ಆಗಸ್ಟ್​ 1 ರಿಂದ ಆಗಸ್ಟ್​ 15ರವರೆಗೆ ಒಟ್ಟು 9 ಪ್ರತಿಶತ ಅಪ್ರಾಪ್ತರಲ್ಲಿ ಕೊರೊನಾ ವರದಿಯಾಗಿದ್ದು ಇದರಲ್ಲಿ ಈ ವಯಸ್ಸಿನವರು 6 ಪ್ರತಿಶತ ಇದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...