alex Certify ಉತ್ತಮ ಆರೋಗ್ಯಕ್ಕಾಗಿ ನಿಮಗಿರಲಿ ಈ ಆಹಾರಾಭ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಆರೋಗ್ಯಕ್ಕಾಗಿ ನಿಮಗಿರಲಿ ಈ ಆಹಾರಾಭ್ಯಾಸ

ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಾವು ಸೇವಿಸುವ ಆಹಾರದ ಪರಿಣಾಮ ಎಲ್ಲಕ್ಕಿಂತ ದೊಡ್ಡದು. ಮನುಕುಲವೀಗ ಕೋವಿಡ್-19 ಸಾಂಕ್ರಾಮಿಕದ ಮೂರನೇ ವರ್ಷಕ್ಕೆ ಪ್ರವೇಶಿಸುತ್ತಿರುವ ವೇಳೆ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಮತ್ತು ಸಮಗ್ರ ಯೋಗಕ್ಷೇಮದ ಮೇಲೆ ಆಹಾರದ ಪೌಷ್ಟಿಕಾಂಶದ ಪರಿಣಾಮವನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಆರೋಗ್ಯಯುತ ಪಥ್ಯ ಅಭ್ಯಸಿಸಿಕೊಳ್ಳಲು ನೆರವಾಗಲೆಂದು, ದಿ ಆರ್ಗ್ಯಾನಿಕ್ ವರ್ಲ್ಡ್‌ನ ಉಮಾ ಪ್ರಸಾದ್ ಅವರು ಈ ವರ್ಷದ ಟಾಪ್ 5 ಆಹಾರ ಟ್ರೆಂಡ್‌ಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ಕೈಯಿಂದ ಕಡೆದ ತುಪ್ಪ

ಉತ್ಪಾದನೆ ಹೆಚ್ಚಿಸುವ ಸಲುವಾಗಿ, ಇಂದು ಕಾರ್ಖಾನೆಗಳಲ್ಲಿ ಯಾಂತ್ರಿಕವಾಗಿ ತುಪ್ಪ ತಯಾರಿಸುವ ಮಂದಿ ಮೊಸರಿನಿಂದ ಪಡೆದ ಬೆಣ್ಣೆಯಿಂದ ಬರುವ ತುಪ್ಪವನ್ನು ಹೊರತೆಗೆಯುವ ಪಾಲಿಸಬೇಕಾದ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಪ್ರಕ್ರಿಯೆಗಳನ್ನು ಪಾಲಿಸುವುದಿಲ್ಲ. ಬದಲಿಗೆ, ಕೆನೆ ಅಥವಾ ಇತರ ರೀತಿಯ ಕೊಬ್ಬನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ತುಪ್ಪದ ಉತ್ಪಾದನೆಗೆ ಚುರುಕು ನೀಡಲು ಯಂತ್ರಗಳನ್ನು ಬಳಸಿ ಸಂಸ್ಕರಿಸುತ್ತಾರೆ. ಇದು ಹೆಚ್ಚಿದ ಇಳುವರಿಗೆ ಸಹಾಯ ಮಾಡುತ್ತದೆ ನಿಜ. ಆದರೆ, ರಾಸಾಯನಿಕಗಳು ಮತ್ತು ಶಾಖದ ಅತಿಯಾದ ಬಳಕೆಯ ಕಾರಣದಿಂದ ಸಾಂಪ್ರದಾಯಿಕವಾಗಿ ಕೈಯಿಂದ ಮಾಡಿದ ತುಪ್ಪಕ್ಕೆ ಹೋಲಿಸಿದರೆ ಈ ತುಪ್ಪವು ಪೌಷ್ಟಿಕಾಂಶದ ಮೌಲ್ಯದಲ್ಲಿ ಬಹಳ ಹಿಂದೆ ಉಳಿಯುತ್ತದೆ. ಕೈಯಲ್ಲಿ ಕಡೆದ ಬೆಣ್ಣೆಯಿಂದ ಕಾಯಿಸಿದ ತುಪ್ಪವು ಆರೋಗ್ಯಕರ ಪಥ್ಯಕ್ಕೆ ನೆರವಾಗುತ್ತದೆ ಎಂದು ಕಾಲಕಾಲಿಕವಾಗಿ ಸಾಬೀತಾಗುತ್ತಲೇ ಬಂದಿದೆ.

ಇಂದು, ಆಹಾರದ ಗುಣಮಟ್ಟ ಮತ್ತು ಪೋಷಕಾಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಕಚ್ಚಾ ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ಅವಧಿಯಲ್ಲಿ ಶುದ್ಧವಾದ, ಕೈಯಿಂದ ಮಾಡಿದ ತುಪ್ಪವು ಮನೆಗಳು ಮತ್ತು ಅಡಿಗೆ ಮನೆಗಳಿಗೆ ಮರಳಲು ಸಿದ್ಧವಾಗಿದೆ. ಹಲವಾರು ದಿನಸಿ ವ್ಯಾಪಾರಿಗಳು ಇಂದು ಶುದ್ಧ ಮತ್ತು ಸಾವಯವ ಆಹಾರಗಳನ್ನು ಮಾರುತ್ತಿದ್ದಾರೆ.

ಸಹೋದರಿ ಕ್ಯಾನ್ಸರ್ ಮುಕ್ತ ಎಂದು ತಿಳಿದ ಕೂಡಲೇ ಕಣ್ಣೀರಧಾರೆ ಹರಿಸಿದ ಯುವತಿ: ವಿಡಿಯೋ ವೈರಲ್

ಸ್ಥಳೀಯವಾಗಿ ಕ್ರೋಢೀಕರಿಸಿದ ಸಾಮಗ್ರಿಗಳು

ಸಾವಿರಾರು ಮೈಲುಗಳಷ್ಟು ದೂರದಿಂದ ಆಮದಾಗುವ ಆಹಾರವು ಸಾಮಾನ್ಯವಾಗಿ ರಾಸಾಯನಿಕ ಸಂರಕ್ಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಉದಾಹರಣೆಗೆ, ಸೋಡಿಯಂ ಆರ್ಥೋಫೆನೈಲ್ಫೆನೇಟ್ (SOPP) ಮತ್ತು ಥಿಯಾಬೆಂಡಜೋಲ್ (TBZ) ಗೋಚರಿಸಬಲ್ಲಂಥ ಅಚ್ಚುಗಳನ್ನು ತಡೆಗಟ್ಟಲು ಮತ್ತು ವಿಳಂಬಗೊಳಿಸಲು ಬಳಸಲಾಗುತ್ತದೆ. ಇದೇ ವೇಳೆ ಕಿನಿನ್‌ಗಳು ಮತ್ತು ಕೈನೆಟಿಕ್ಸ್‌ಗಳು ಹಸಿರು ತರಕಾರಿಗಳನ್ನು ಹಳದಿ ಬಣ್ಣಕ್ಕೆ ತಿರುಗದಂತೆ ಮಾಡುತ್ತದೆ.

ಮತ್ತೊಂದೆಡೆ, ಸ್ಥಳೀಯವಾಗಿ-ಬೆಳೆದ ಆಹಾರವನ್ನು ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ತಲುಪಿಸಬಹುದು. ಜೊತೆಗೆ ಈ ರೀತಿಯ ಆಹಾರದಲ್ಲಿ ನೈಸರ್ಗಿಕ ಪೌಷ್ಟಿಕಾಂಶದ ಮೌಲ್ಯವು ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಸಾಧ್ಯತೆ ಇರುವುದಿಲ್ಲ. ಇಂಥ ಆಹಾರಗಳು ನೈಸರ್ಗಿಕವಾಗಿ ಮಾಗಿದ ಸ್ಥಿತಿಯಲ್ಲಿ ಸಿಕ್ಕರೆ ಇನ್ನಷ್ಟು ಉತ್ತಮ ತಾಜಾ ಉತ್ಪನ್ನಗಳನ್ನು ಒಮ್ಮೆ ಕಿತ್ತುಕೊಂಡರೆ, ಜೀವಕೋಶಗಳು ಕುಗ್ಗಲು ಪ್ರಾರಂಭಿಸುತ್ತವೆ ಮತ್ತು ಪೋಷಕಾಂಶಗಳು ಶೀಘ್ರದಲ್ಲೇ ಖಾಲಿಯಾಗಲು ಪ್ರಾರಂಭಿಸುತ್ತವೆ, ಹೀಗಾಗಿ ಸಾಧ್ಯವಾದಷ್ಟು ಬೇಗನೇ ಆಹಾರವನ್ನು ಸೇವಿಸಬೇಕು ಎಂಬುದು ಬಹಳ ಮುಖ್ಯ.

ಆರೋಗ್ಯಕರವಾದ ಸಾಂಪ್ರದಾಯಿಕ ತಿಂಡಿಗಳು

ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿವೆ. ನಮ್ಮ ನಮ್ಮ ಪ್ರಾದೇಶಿಕ ಸಂಸ್ಕೃತಿಗಳಿಗೆ ಹೆಚ್ಚು ಪೂರಕವಾದ ಧಾನ್ಯಗಳು ಮತ್ತು ಬೀಜಗಳ ಉತ್ತಮಿಕೆ ಬಳಸಿಕೊಂಡು ತಯಾರಿಸಲಾದ ತಿಂಡಿಗಳನ್ನು ನಾವು ಆಯ್ದುಕೊಳ್ಳುವುದು ಉತ್ತಮ. ಕಡ್ಲೇಮಿಠಾಯಿಂಥ ಆಯ್ಕೆಗಳು ಈ ನಿಟ್ಟಿನಲ್ಲಿ ಬಹಳ ಉತ್ತಮವಾದವು.

ಸಾಂಪ್ರದಾಯಿಕ ತಿಂಡಿಗಳನ್ನು ಮಾಡುವ ಪಾಕವಿಧಾನಗಳು ಆಯಾ ಋತುಗಳನ್ನು ಆಧರಿಸಿವೆ. ಇದರಿಂದಾಗಿ ಪ್ರಕೃತಿಯಲ್ಲಿ ಬದಲಾಗುವ ಲಯಗಳಿಗೆ ತಕ್ಕಂತೆ ನಮಗೆ ಅಗತ್ಯವಿರುವ ಪೋಷಣೆ ಮತ್ತು ಶಕ್ತಿಯನ್ನು ಪಡೆಯಲು ಈ ವಿಧಾನಗಳು ನೆರವಾಗುತ್ತವೆ. ಬೆಲ್ಲದ ಉದಾಹರಣೆಯನ್ನೇ ತೆಗೆದುಕೊಂಡರೆ: ವ್ಯಾಪಕವಾದ ರಕ್ತ ಶುದ್ಧಿಕಾರಕ, ಮತ್ತು ವಿಟಮಿನ್ ಡಿಯ ಪ್ರಬಲ ಮೂಲವಾದ ಬೆಲ್ಲ ನಮ್ಮ ದೇಹದಲ್ಲಿ ಶಕ್ತಿ ಮತ್ತು ಚೈತನ್ಯವನ್ನು ಪುನಃಸ್ಥಾಪಿಸಲು, ಸಾಂಪ್ರದಾಯಿಕವಾಗಿ ತಯಾರಿಸಬಲ್ಲ ಖಾದ್ಯಗಳಲ್ಲಿ ಒಂದಾಗಿದೆ.

ಊ ಅಂಟಾವಾ……ಹಾಡಿಗೆ ವಧು-ವರನ ಬೊಂಬಾಟ್ ಸ್ಟೆಪ್ಸ್….!

ಸಾವಯವ ಹಾಗೂ ಶುದ್ಧ ಆಹಾರಗಳು

ನಿಮ್ಮ ನೆಚ್ಚಿನ ಚಿಪ್ಸ್‌ ಪ್ಯಾಕೆಟ್ ಒಂದನ್ನು ಕೈಗೆ ತೆಗೆದುಕೊಂಡು, ಅದರಲ್ಲಿರುವ ಪದಾರ್ಥಗಳ ಪಟ್ಟಿ ಓದಿದರೆ, ನೀವು ಪಾಮ್ ಎಣ್ಣೆಯಲ್ಲಿ ಅದನ್ನು ಕರಿದಿರುವ ವಿಚಾರ ಅರಿಯುವಿರಿ. ನಿಮ್ಮ ಶಾಂಪೂ ಸ್ಯಾಶೆಯ ಲೇಬಲ್‌ನಲ್ಲಿ ಪ್ಯಾರಾಬೆನ್‌ಗಳು ಮತ್ತು ಸಲ್ಫೇಟ್‌ಗಳನ್ನು ಬಳಕೆ ಬಗ್ಗೆ ತಿಳಿಯಬಹುದು. ನಿಮ್ಮ ಮೆಚ್ಚಿನ ಕೆನೆ ಚೀಸ್ ಕ್ಯಾರೇಜಿನನ್ ಅನ್ನು ಹೊಂದಿರಬಹುದು. ನಾವು ಈಗ ನಮ್ಮ ದೈನಂದಿನ ಜೀವನದಲ್ಲಿ ಸೇವಿಸುವ ಆಹಾರಗಳಲ್ಲಿ ಎಷ್ಟು ರಾಸಾಯನಿಕಗಳ ಬಳಕೆ ನೋಡುತ್ತೇವೆ ಎಂದು ಅರಿತರೆ ದಿಗ್ಭ್ರಮೆಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸಂಖ್ಯೆಯ ಗ್ರಾಹಕರು ಕೃತಕ ಸಂರಕ್ಷಕಗಳು ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ದಿನಸಿಗಳ ಬದಲಿಗೆ ಶುದ್ಧ ಆಯ್ಕೆಗಳತ್ತ ವಾಲುತ್ತಿದ್ದಾರೆ – ಶುದ್ಧ ಆಹಾರಗಳು, ಸಾವಯವ ಉತ್ಪನ್ನಗಳು ಅಥವಾ ಆರೋಗ್ಯಕರ ಪೌಷ್ಟಿಕಾಂಶವನ್ನು ನೀಡುವ ಆಹಾರಗಳಿಗೆ ಬೇಡಿಕೆ ಹೆಚ್ಚುತಲೇ ಸಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಪಾರದರ್ಶಕ, ನೈಸರ್ಗಿಕ ಆಹಾರದ ಆಯ್ಕೆ ಮಾಡಬೇಕಿದ್ದು, ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಆಗುವ ಹಾನಿಕಾರಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.

ದೈನಂದಿನ ಅಡುಗೆಗಾಗಿ ಸ್ವಾಭಾವಿಕವಾಗಿ ತಯಾರಿಸಿದ ಎಣ್ಣೆಗಳು

ಸೂರ್ಯಕಾಂತಿ ಮತ್ತು ಸಾಸಿವೆಯಿಂದ ಅಕ್ಕಿ ಹೊಟ್ಟು ಮತ್ತು ಕಡಲೆಕಾಯಿಯವರೆಗೆ, ಸಂಸ್ಕರಿಸಿದ ಅಡುಗೆ ಎಣ್ಣೆಗಳ ಬದಲಿಗೆ, ಗಾಣಗಳಲ್ಲಿ ಅರೆದು ತೆಗೆಯುವ ಎಣ್ಣೆಗಳ ಬಳಕೆ ಇದೀಗ ದೈನಂದಿನ ಅಡುಗೆಯಲ್ಲಿ ಸಾಮಾನ್ಯವಾಗುತ್ತಿದೆ.

ಎಣ್ಣೆ ಬೀಜಗಳನ್ನು ನಿಧಾನವಾಗಿ, ಕೋಣೆಯ ಉಷ್ಣಾಂಶದಲ್ಲಿ ಅರೆಯುವ ಮೂಲಕ ಅವುಗಳ ಸ್ವಾಭಾವಿಕ ಪರಿಮಳ ಹಾಗೂ ಪೋಷಕಾಂಶಗಳಿಗೆ ಹಾನಿಯಾಗದಂತೆ ಆರೋಗ್ಯಯುತ ಅಡುಗೆ ಎಣ್ಣೆ ತಯಾರಿಸಲಾಗುತ್ತಿದೆ. ತ್ವರಿತ ಮತ್ತು ಅಧಿಕ ಪ್ರಮಾಣದ ಉತ್ಪಾದನೆಗಾಗಿ ತೈಲಗಳನ್ನು ಹೆಚ್ಚಿನ ತಾಪಮಾನದಲ್ಲಿ ಸಂಸ್ಕರಿಸಿದಾಗ ಅಂಥ ಎಣ್ಣೆಗಳಲ್ಲಿ ಯಾವುದೇ ಪೋಷಕಾಂಶಗಳು ಉಳಿಯುವುದಿಲ್ಲಹೈಡ್ರೋಜನೀಕರಣದಂತಹ ಪ್ರಕ್ರಿಯೆಗಳಿಗೆ ಒಳಗಾದ ಎಣ್ಣೆಗಳು ಉತ್ತಮ ಕೊಬ್ಬುಗಳನ್ನು ಒಳಗೊಂಡಂತೆ ತೈಲಗಳ ನೈಸರ್ಗಿಕ ರಾಸಾಯನಿಕ ಸಂಯೋಜನೆಯ ಬದಲಾವಣೆಗೆ ಒಳಗಾಗುತ್ತವೆ.

ಕೊನೆಯದಾಗಿ

ನಮ್ಮ ಆಹಾರದ ಗುಣಮಟ್ಟ ಮತ್ತು ನಮ್ಮ ದೀರ್ಘಕಾಲೀನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಮಾನವಾಗಿ ಕಾಳಜಿ ವಹಿಸುವ ಸಮುದಾಯವಾಗಿ ನಾವು ವಿಕಸನಗೊಳ್ಳುವ ಪ್ರಕ್ರಿಯೆಯಲ್ಲಿ 2022ರಲ್ಲಿ ಅನೇಕ ಟ್ರೆಂಡ್‌ಗಳು ಬರಲಿದ್ದು, ಆಹಾರದ ಉತ್ಪಾದನೆಯ ಹಿಂದೆ ಇರುವ ಕ್ರಮಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಜಾಗೃತಿ ಹೊಂದಿರುವ ಸಮಾಜವಾಗಿ ನಾವು ಬದಲಾಗುವತ್ತ ಹೆಜ್ಜೆ ಇಡಲಿದ್ದೇವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...