alex Certify ತಲೆಯಿಂದ ಕೊಂಬುಗಳ ಕಳಚಿದ ಕಡವೆ: ಇಲ್ಲಿದೆ ಅಚ್ಚರಿಯ ಅಪರೂಪದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಯಿಂದ ಕೊಂಬುಗಳ ಕಳಚಿದ ಕಡವೆ: ಇಲ್ಲಿದೆ ಅಚ್ಚರಿಯ ಅಪರೂಪದ ವಿಡಿಯೋ

ಅಮೆರಿಕದ ಕಡವೆ (ಮೂಸ್) ತನ್ನ ಸುಂದರ ಕೊಂಬುಗಳಿಗೆ ಪ್ರಸಿದ್ಧಿ ಹೊಂದಿದೆ. ಆದರೆ ಇದು ಕೆಲವು ಸಂದರ್ಭದಲ್ಲಿ ತನ್ನ ಕೊಂಬನ್ನು ಕಳಚುತ್ತದೆ. ಅದರ ವಿಡಿಯೋ ಇದೀಗ ವೈರಲ್‌ ಆಗಿದೆ.

ಈ ಅಪರೂಪದ ಘಟನೆ ಅಮೆರಿಕದ ಅಲಾಸ್ಕಾದ ಮನೆಯೊಂದರ ಡೋರ್ ಬೆಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟೈರಾ ಬೊಗರ್ಟ್ ಅವರು ಫೇಸ್‌ಬುಕ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಕಡವೆಯು ನಡೆಯುತ್ತಾ ಸಾಗುತ್ತದೆ. ನಂತರ ಸ್ವಲ್ಪ ಸಮಯ ನಿಲ್ಲುತ್ತದೆ. ತನ್ನ ದೇಹವನ್ನು ನಾಯಿಯಂತೆ ಅಲುಗಾಡಿಸುತ್ತದೆ. ಕ್ಷಣ ಮಾತ್ರದಲ್ಲಿ ಕೊಂಬು ಅದರ ತಲೆಯಿಂದ ಹಾರಿಹೋಗುತ್ತದೆ. ಆಗ ಅದು ಓಡಿಹೋಗುತ್ತದೆ.

ಅಬ್ಬಾ ಎನ್ನುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಜೀವಮಾನದಲ್ಲಿ ಇಂಥ ವಿಡಿಯೋ ನೋಡಿರಲಿಲ್ಲ ಎಂದಿರುವ ನೆಟ್ಟಿಗರು ಇದೇಕೆ ಹೀಗೆ ಮಾಡುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...