alex Certify ದೇಶಾದ್ಯಂತ ಇವಿ ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳ ಅಳವಡಿಕೆಗೆ ಕೇಂದ್ರದ ಉತ್ಸುಕತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಾದ್ಯಂತ ಇವಿ ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳ ಅಳವಡಿಕೆಗೆ ಕೇಂದ್ರದ ಉತ್ಸುಕತೆ

ಶುದ್ಧ ಸಾರಿಗೆ ಕ್ಷೇತ್ರಕ್ಕೆ ಇನ್ನಷ್ಟು ಉತ್ತೇಜನ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಮುಂದಿನ ವರ್ಷದ ಬಜೆಟ್‌ನಲ್ಲಿ ಪೆಟ್ರೋಲ್/ಡೀಸೆಲ್ ವಾಹನಗಳಿಂದ ಬ್ಯಾಟರಿ ಚಾಲಿತ ವಾಹನಗಳತ್ತ ಬದಲಾವಣೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಕೆಲವೊಂದು ಕ್ರಮಗಳನ್ನು ಘೋಷಿಸಿದೆ.

ಬ್ಯಾಟರಿ ಸ್ವಾಪಿಂಗ್ (ಬ್ಯಾಟರಿ ಬದಲಾವಣೆ) ಮಾಡಿಕೊಳ್ಳಲು ಅಗತ್ಯವಾದ ಶಾಸನಗಳನ್ನು ತರಲು ಕೇಂದ್ರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಮುಂದಿನ ಎರಡು ತಿಂಗಳಲ್ಲಿ ನಿಯಮಗಳನ್ನು ಸರ್ಕಾರ ಜಾರಿಗೆ ತರುವ ನಿರೀಕ್ಷೆ ಇದೆ.

ಮೂಲ –ವಲಸಿಗರ ನಡುವೆ ಜೋರಾಯ್ತು ಶೀತಲ ಸಮರ, ನಾಯಕರಿಗೆ ದೂರು ನೀಡಿದ ಹೊಸಕೋಟೆ ಕಾಂಗ್ರೆಸ್ ಮುಖಂಡರು

ಎಆರ್‌ಎಐ, ಐಸಿಎಟಿ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಸಂಬಂಧ ಚಿಂತನ ಮಂಥನದಲ್ಲಿ ಭಾಗಿಯಾಗಿವೆ. ಬ್ಯಾಟರಿ ವಿಧ, ಗುಣಮಟ್ಟ, ಆಯಾಮಗಳು, ಕನೆಕ್ಟರ್‌ಗಳು ಇತರೆ, ಸೇರಿದಂತೆ ಬ್ಯಾಟರಿ ಸಂಬಂಧಿ ಅನೇಕ ವಿಚಾರಗಳ ಬಗ್ಗೆ ಈ ವೇಳೆ ಸಮಾಲೋಚನೆ ನಡೆಸಿ, ಬ್ಯಾಟರಿ ಬದಲಾವಣೆ ಕುರಿತು ನಿಯಮಾವಳಿಗಳನ್ನು ತರಲಾಗುವುದು.

ಬ್ಯಾಟರಿ ಬದಲಾವಣೆ ನಿಲ್ದಾಣಗಳನ್ನು ದೇಶದೆಲ್ಲೆಡೆ ತರುವ ಮೂಲಕ ಎಲ್ಲಾ ಬ್ರಾಂಡ್‌ಗಳ ಇವಿ ಬಳಕೆದಾರರಿಗೆ ಅನುವಾಗುವ ಸೌಲಭ್ಯ ಸೃಷ್ಟಿಸುವ ಉದ್ದೇಶ ಕೇಂದ್ರದ್ದಾಗಿದೆ. ಹೊಸ ಮಾದರಿಗಳು ಮತ್ತು ಪೈಲಟ್‌ ಪ್ರಾಜೆಕ್ಟ್‌ಗಳಿಗೆ ಚಾಲನೆ ಕೊಟ್ಟು, ಈ ಅನುಭವಗಳಿಂದ ವಿಚಾರಗಳನ್ನು ನೋಟ್ ಮಾಡಿಕೊಂಡು ಬ್ಯಾಟರಿ ಸ್ವಾಪಿಂಗ್ ನಿಲ್ದಾಣಗಳ ಸ್ಥಾಪನೆಗೆ ರೂಪುರೇಷೆ ರಚಿಸಲಾಗುವುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...