alex Certify ಮಂಗಳೂರಿನಲ್ಲಿ ಕೋವಿಡ್‌ನ ಎಟಾ ಅವತಾರ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗಳೂರಿನಲ್ಲಿ ಕೋವಿಡ್‌ನ ಎಟಾ ಅವತಾರ ಪತ್ತೆ

ಕೋವಿಡ್-19 ವೈರಾಣುವಿನ ಎಟಾ (ಬಿ.1.525) ಅವತರಣಿಕೆಯು ಮಂಗಳೂರಿನ ವ್ಯಕ್ತಿಯೊಬ್ಬರಲ್ಲಿ ಕಂಡುಬಂದಿದೆ. ದುಬೈನಿಂದ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಆರ್‌ಟಿ ಪಿಸಿಆರ್‌ ಸ್ಯಾಂಪಲ್‌ನಲ್ಲಿ ಅವರಿಗೆ ಎಟಾ ವೈರಾಣುವಿದ್ದ ವಿಷಯ ತಿಳಿದುಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಎಟಾ ಕೋವಿಡ್ ವೈರಾಣು ಇದೇ ಜುಲೈನಲ್ಲಿ ಮಿಜ಼ೋರಾಂನಲ್ಲಿ ಕಂಡು ಬಂದಿತ್ತು. ಈ ಸ್ಯಾಂಪಲ್‌ಗಳನ್ನು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲಿರುವ ರಾಷ್ಟ್ರೀಯ ಜೀವವೈದ್ಯಕೀಯ ಜೀನಾಮಿಕ್ಸ್ ಸಂಸ್ಥೆಗೆ ಪರೀಕ್ಷೆ ಮಾಡಲು ಕಳುಹಿಸಲಾಗಿತ್ತು.

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ಎಟಾ ವೈರಾಣು ಕಂಡುಬರುವ ಮಂದಿಯಲ್ಲಿ ಸಾವಿನ ಪ್ರಮಾಣ 2.7% ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ. ಡಿಸೆಂಬರ್‌ 2020ರಲ್ಲಿ ಎಟಾ ಕೋವಿಡ್ ವೈರಾಣುವಿನ ಮೊದಲ ಸ್ಯಾಂಪಲ್‌ಗಳು ಬ್ರಿಟನ್/ನೈಜೀರಿಯಾದಲ್ಲಿ ಪತ್ತೆಯಾಗಿವೆ.

ಇದೇ ವೇಳೆ, ರಾಜ್ಯದಲ್ಲಿ ಶುಕ್ರವಾರದಂದು ಹೊಸದಾಗಿ 1,875 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 25 ಸಾವುಗಳು ಸಂಭವಿಸಿವೆ. ಇದೇ ದಿನದಂದು 1,651 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...