alex Certify ಎಚ್ಚರ….! ಪಿಎಫ್ ಖಾತೆದಾರರು ಈ ಕೆಲಸ ಮಾಡಿದ್ರೆ ಖಾಲಿಯಾಗುತ್ತೆ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ….! ಪಿಎಫ್ ಖಾತೆದಾರರು ಈ ಕೆಲಸ ಮಾಡಿದ್ರೆ ಖಾಲಿಯಾಗುತ್ತೆ ಹಣ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ. ಯಾವುದೇ ಖಾತೆದಾರರು ತಪ್ಪಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಇ ಪಿ ಎಫ್ ಒ ಹೇಳಿದೆ. ಒಂದು ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಲ್ಲಿ ಖಾತೆಯಲ್ಲಿರುವ ಹಣ ಖಾಲಿಯಾಗುವ ಸಾಧ್ಯತೆಯಿದೆ ಎಂದು ಅದು ಎಚ್ಚರಿಕೆ ನೀಡಿದೆ.

ಪಿಎಫ್ ಖಾತೆದಾರರು, ಯಾವುದೇ ಫ್ಲಾಟ್ಫಾರ್ಮ್ ನಲ್ಲಿ ಪಾನ್, ಆಧಾರ್ ಅಥವಾ ಬ್ಯಾಂಕ್ ಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಇ ಪಿ ಎಫ್ ಒ ಸೂಚಿಸಿದೆ. ಫೋನ್ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿಯನ್ನು ಕೇಳಿದ್ರೆ ಜಾಗರೂಕರಾಗಿರಿ. ಈ ಮಾಹಿಯನ್ನು ಹಂಚಿಕೊಳ್ಳಬೇಡಿ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಲಿಂಕ್ ಬಂದರೂ ಅದನ್ನು ತೆರೆಯಬೇಡಿ ಎಂದು ಇ ಪಿ ಎಫ್ ಒ ಹೇಳಿದೆ.

ಇ ಪಿ ಎಫ್‌ ಒ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಇಪಿಎಫ್‌ಒ ಯಾವುದೇ ಸೇವೆಗಾಗಿ ವಾಟ್ಸಾಪ್, ಸಾಮಾಜಿಕ ಮಾಧ್ಯಮ ಇತ್ಯಾದಿಗಳ ಮೂಲಕ ಯಾವುದೇ ಮೊತ್ತವನ್ನು ಠೇವಣಿ ಮಾಡಲು ಎಂದಿಗೂ ಕೇಳುವುದಿಲ್ಲ. ಹಾಗಾಗಿ ಯಾರೇ ಕೇಳಿದ್ರೂ ಮಾಹಿತಿ ನೀಡಬೇಡಿ. ನಿಮ್ಮ ಮಾಹಿತಿ ಬಳಸಿಕೊಂಡು ಮೋಸ ಮಾಡುವ ಸಾಧ್ಯತೆ ಹೆಚ್ಚಾಗ್ತಿದೆ ಎಂದು ಇ ಪಿ ಎಫ್ ಒ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...