alex Certify ಕೊರೊನಾ ನಂತ್ರ ಸರ್ಕಾರಿ ಶಾಲೆಗೆ ಮಕ್ಕಳು: ಖಾಸಗಿ ಶಾಲೆಗಿಂತ ಹೆಚ್ಚಾಯ್ತು ದಾಖಲಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಂತ್ರ ಸರ್ಕಾರಿ ಶಾಲೆಗೆ ಮಕ್ಕಳು: ಖಾಸಗಿ ಶಾಲೆಗಿಂತ ಹೆಚ್ಚಾಯ್ತು ದಾಖಲಾತಿ

ಕೊರೊನಾ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಕೊರೊನಾ ನಂತ್ರ ಸರ್ಕಾರಿ ಶಾಲೆಗಳಿಗೆ ಮುಖ ಮಾಡ್ತಿರುವ ಮಕ್ಕಳ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ವಾರ್ಷಿಕ ಶಿಕ್ಷಣ ಸ್ಥಿತಿ ವರದಿ 2021 ರ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದ ಮಕ್ಕಳ ಸಂಖ್ಯೆ ಹೆಚ್ಚಿದೆ. ಉತ್ತರ ಪ್ರದೇಶ ಮತ್ತು ಕೇರಳ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಹೆಚ್ಚಳ ಕಂಡು ಬಂದಿದೆ.

25 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಒಟ್ಟು 76,706 ಕುಟುಂಬಗಳು ಮತ್ತು ಐದರಿಂದ 16 ವರ್ಷದೊಳಗಿನ 75,234 ಮಕ್ಕಳು ಸೇರಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ, ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದ ಮಕ್ಕಳ ಸಂಖ್ಯೆ ದೊಡ್ಡದಿದೆ. ಆರರಿಂದ 14 ವರ್ಷ ವಯಸ್ಸಿನ ಮಕ್ಕಳ ಖಾಸಗಿ ಶಾಲೆಗಳ ದಾಖಲಾತಿ 2018 ರಲ್ಲಿ ಶೇಕಡಾ 32.5 ರಷ್ಟಿತ್ತು. 2021 ರಲ್ಲಿ ಶೇಕಡಾ 24.4 ಕ್ಕೆ ಇಳಿದಿದೆ. ಈ ಬದಲಾವಣೆಯು ಎಲ್ಲಾ ತರಗತಿಗಳಲ್ಲಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿ ಇಬ್ಬರಲ್ಲೂ ಕಂಡು ಬಂದಿದೆ.

2018 ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಸರಾಸರಿ ದಾಖಲಾತಿ ಶೇಕಡಾ 64.3 ರಷ್ಟಿತ್ತು, ಇದು ಕಳೆದ ವರ್ಷ ಶೇಕಡಾ 65.8 ಕ್ಕೆ ಮತ್ತು ಈ ವರ್ಷ ಶೇಕಡಾ 70.3 ಕ್ಕೆ ಏರಿಕೆಯಾಗಿದೆ. 2006 ರಿಂದ 2014 ರವರೆಗೆ, ಖಾಸಗಿ ಶಾಲಾ ಶಿಕ್ಷಣದಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿತ್ತು. ಆದ್ರೆ ಕೊರೊನಾ ನಂತ್ರ ಇದ್ರಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಆದ್ರೆ ಜನರು ಇದನ್ನು ತಾತ್ಕಾಲಿಕಗೊಳಿಸಲಿದ್ದಾರಾ ಅಥವಾ ಶಾಶ್ವತವಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಿದ್ದಾರಾ ಎಂಬುದು ಸಮಯ ನಿರ್ಧರಿಸಬೇಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...