alex Certify ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತೆ ಈ ಬ್ಯಾಂಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತೆ ಈ ಬ್ಯಾಂಕ್….!

ಖಾಸಗಿ ವಲಯದ ಪ್ರಮುಖ ಬ್ಯಾಂಕ್​ ಎಚ್​.ಡಿ.ಎಫ್‌.ಸಿ. ತನ್ನ ಮೊದಲ ಮಹಿಳಾ ಶಾಖೆಯನ್ನುಕೇರಳದ ಕೋಝಿಕ್ಕೋಡ್​ನಲ್ಲಿ ತೆರೆದಿದೆ.

ಜಿಲ್ಲೆಯ ವ್ಯಾಪಾರಿ ಕೇಂದ್ರವಾಗಿರುವ ಚೆರೂಟ್ಟಿ ರಸ್ತೆಯಲ್ಲಿರುವ ಶಾಖೆಯಲ್ಲಿ ಎಲ್ಲಾ ಸಿಬ್ಬಂದಿ ಮಹಿಳೆಯರೇ ಇರಲಿದ್ದಾರೆ. ಬುಧವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್​ ಬೀನಾ ಫಿಲಿಪ್​ ಅವರು ಶಾಖೆಯನ್ನು ಉದ್ಘಾಟಿಸಿದರು.

ಮಾರ್ಚ್​ 31, 2022 ರಂತೆ ಮಹಿಳೆ ಉದ್ಯೋಗಿಗಳು ಶೇಕಡಾ 21.7 ರಷ್ಟಿದ್ದಾರೆ ಮತ್ತು 2025ರ ವೇಳೆಗೆ ಇದನ್ನು ಶೇಕಡಾ 25 ಕ್ಕೆ ಹೆಚ್ಚಿಸುವ ಗುರಿ ಇದೆ ಎಂದು ಬ್ಯಾಂಕ್​ ಹೇಳಿಕೆ ತಿಳಿಸಿದೆ.

ದಕ್ಷಿಣ (ತಮಿಳುನಾಡು, ಪುದುಚೇರಿ ಮತ್ತು ಕೇರಳ) ಶಾಖೆಯ ಬ್ಯಾಂಕಿಂಗ್​ ಹೆಡ್​ ಸಂಜೀವ್​ ಕುಮಾರ್​, ಮಹಿಳೆಯರೇ ಕರ್ತವ್ಯ ನಿರ್ವಹಿಸುವ ಶಾಖೆಯನ್ನು ತೆರೆಯುವುದು ಬ್ಯಾಂಕಿನ ಲಿಂಗ ಮತ್ತು ವೈವಿಧ್ಯತೆಯ ಉಪಕ್ರಮಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನಗಳಿಗೆ ಮತ್ತೊಂದು ಉದಾಹರಣೆಯಾಗಿದೆ ಎಂದಿದ್ದಾರೆ.

ಕರ್ನಾಟಕ ಬ್ಯಾಂಕ್​, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್​ ಬಹಳ ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಇಂತಹ ಪ್ರಯತ್ನ ಮಾಡಿ ಗಮನ ಸೆಳೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...