alex Certify ಖ್ಯಾತ ರ‍್ಯಾಪರ್ ’ಎಮಿನೆಮ್‌’ ಹೊಸ ವರ್ಷಕ್ಕೆ ಖರೀದಿಸಿದ ಡಿಜಿಟಲ್‌ ಟೋಕನ್‌ ಮೊತ್ತ ಬರೋಬ್ಬರಿ 3.3 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ರ‍್ಯಾಪರ್ ’ಎಮಿನೆಮ್‌’ ಹೊಸ ವರ್ಷಕ್ಕೆ ಖರೀದಿಸಿದ ಡಿಜಿಟಲ್‌ ಟೋಕನ್‌ ಮೊತ್ತ ಬರೋಬ್ಬರಿ 3.3 ಕೋಟಿ ರೂ.

ಅಮೆರಿಕದ ಖ್ಯಾತ ರ‍್ಯಾಪರ್ ಎಮಿನೆಮ್‌ ಯಾರಿಗೆ ತಾನೇ ಗೊತ್ತಿಲ್ಲ. ಆತನ ಎಲ್ಲ ಹಾಡುಗಳು ಸೂಪರ್‌ಹಿಟ್‌. ಯುವಕರ ಮನಸ್ಸಿನಲ್ಲಿಆತನಿಗೆ ವಿಶೇಷ ಸ್ಥಾನವಿದೆ. ಪಾಶ್ಚಿಮಾತ್ಯ ಆಧುನಿಕ ಸಂಗೀತ ಕ್ಷೇತ್ರದಲ್ಲಿಎಮಿನೆಮ್‌ ಎಂದರೆ, ದಿಗ್ಗಜನೇ ಸರಿ. ಅಂಥ ಗಾಯಕ ಇತ್ತೀಚೆಗೆ ಹೊಸ ವರ್ಷ ಸಂಭ್ರಮಾಚರಣೆಗೆ 3.3 ಕೋಟಿ ರೂ. ಮೌಲ್ಯದ ಬೋರ್ಡ್‌ ಯಾಚ್‌ ಕ್ಲಬ್‌ ಸಂಗ್ರಹದಲ್ಲಿನ ಡಿಜಿಟಲ್‌ ಟೋಕನ್‌ (ಎನ್‌ಎಫ್‌ಟಿ) ಖರೀದಿಸಿದ್ದಾನೆ.

10 ಸಾವಿರ ಸಂಗ್ರಹದಲ್ಲಿ’ಎಮಿನ್‌ಏಪ್‌’ ಎಂಬ ಮಂಗವನ್ನು ಹೋಲುವ ಟೋಕನ್‌ವೊಂದನ್ನು ಆತ ಖರೀದಿ ಮಾಡಿದ್ದಾನೆ. ಇದೊಂದು ಡಿಜಿಟಲ್‌ ಆರ್ಟ್‌ವರ್ಕ್‌. ಭೌತಿಕ ಕಲಾವಸ್ತುಗಳು ಸಮಯ ಕಳೆದಂತೆ ಹಾಳಾಗುತ್ತವೆ. ಹಾಗಾಗಿ ಈಗ ಡಿಜಿಟಲ್‌ ಕಲಾಕೃತಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ನಿಮ್ಮ ಹೆಸರಿನಲ್ಲಿ ಶಾಶ್ವತವಾಗಿ ಆನ್‌ಲೈನ್‌ನಲ್ಲಿ ಉಳಿದುಕೊಳ್ಳಲಿದೆ ಎಂದು ತಯಾರಕರು ಪ್ರಚಾರ ಮಾಡುತ್ತಿದ್ದಾರೆ.

ಕ್ಯಾಪ್‌ ಧರಿಸಿಕೊಂಡು, ಕುತ್ತಿಗೆಗೆ ಬಂಗಾರದ ಸರವೊಂದನ್ನು ಧರಿಸಿರುವ ಮಂಗದ ಮುಖ ಇರುವ ಡಿಜಿಟಲ್‌ ಕಲಾಕೃತಿ ಎಮಿನೆಮ್‌ ಮನಸೆಳೆದಿದೆ. ಆತನ ಗಾಯನ ಸಂದರ್ಭದ ಉಡುಪನ್ನೇ ಹೋಲುತ್ತದೆ ಎಂಬ ಕಾರಣಕ್ಕೆ ಡಿಜಿಟಲ್‌ ಕಲಾಕೃತಿ ಅಥವಾ ಟೋಕನ್‌ ಖರೀದಿಸಿದ್ದಾನೆ ಎನ್ನಲಾಗಿದೆ.

BIG BREAKING: RBI ಹೊಸ ಹಣಕಾಸು ನೀತಿ ಘೋಷಣೆ, ರೆಪೊ ದರ ಬದಲಿಸದಿರಲು ನಿರ್ಧಾರ -ರೆಪೊ ಶೇ. 4, ರಿವರ್ಸ್ ರೆಪೊ ದರ ಶೇ. 3.35 ರಲ್ಲೇ ಮುಂದುವರಿಕೆ

ತನ್ನ ಕಲಾಕೃತಿಯನ್ನು ಎಮಿನೆಮ್‌ ಎಂಬ ದಿಗ್ಗಜ ಖರೀದಿಸಿದ್ದಕ್ಕೆ ಸಂತಸ ಹಂಚಿಕೊಂಡಿರುವ ಗೀಗಾಜ್ಜಾ ಎಂಬ ಕಲಾವಿದ ಟ್ವಿಟರ್‌ನಲ್ಲಿ ವಿಷಯ ಹಂಚಿಕೊಂಡಿದ್ದಾನೆ. ನನಗೆ ಹುಚ್ಚು ಹಿಡಿದಂತೆ ಆಗಿದೆ. ಎಮಿನೆಮ್‌ನ ಮುಂದಿನ ಹಾಡಿಗೆ ಸಾಹಿತ್ಯ ಬರೆಯಬಲ್ಲೆನೇ? ಎಂದು ಟ್ವೀಟ್‌ ಮಾಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿಎಮಿನೆಮ್‌ ಹೊಂದಿರುವ ಅಧಿಕೃತ ಟ್ವಿಟರ್‌ ಖಾತೆಯ ಪ್ರೊಫೈಲ್‌ ಫೋಟೊವನ್ನು ಎಮಿನೆಮ್‌ , ಬೋರ್ಡ್‌ ಏಪ್‌ ಕಾರ್ಟೂನ್‌ಗೆ ಬದಲಾಯಿಸಿರುವುದು ಎಲ್ಲ ಬೆಳವಣಿಗೆಗಳಿಗೆ ಕಾರಣವಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...