alex Certify BIG NEWS: ಕೋವಿಡ್​ ಲಸಿಕೆಯಲ್ಲಿ ದೇಶದ ಸಾಧನೆ ಬಳಿಕ ಪ್ರಧಾನಿ ಮೋದಿ ಟ್ವಿಟರ್​ ಖಾತೆಯಲ್ಲಾಗಿದೆ ಈ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್​ ಲಸಿಕೆಯಲ್ಲಿ ದೇಶದ ಸಾಧನೆ ಬಳಿಕ ಪ್ರಧಾನಿ ಮೋದಿ ಟ್ವಿಟರ್​ ಖಾತೆಯಲ್ಲಾಗಿದೆ ಈ ಬದಲಾವಣೆ

ದೇಶವು 100 ಕೋಟಿ ಕೋವಿಡ್​ ಲಸಿಕೆ ಡೋಸ್​​ ವಿತರಿಸಿದ ಸಂಭ್ರಮದ ಪ್ರಯುಕ್ತ ಪ್ರಧಾನಿ ಮೋದಿ ತಮ್ಮ ಟ್ವಿಟರ್​ ಖಾತೆಯ ಪ್ರೊಫೈಲ್​ ಫೋಟೋವನ್ನು ಬದಲಾಯಿಸಿದ್ದಾರೆ.

100 ಕೋವಿಡ್​ ಕೊರೊನಾ ಲಸಿಕೆ ವಿತರಣೆ ಮೈಲಿಗಲನ್ನು ತೋರಿಸುವ ಫೋಟೋವನ್ನು ತಮ್ಮ ಪ್ರೊಫೈಲ್​ ಫೋಟೋದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇಂದು ದೇಶವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ, ಇದಕ್ಕೂ ಮುನ್ನ ಟ್ವಿಟರ್​ ಖಾತೆಯಲ್ಲಿ ಈ ರೀತಿಯ ಬದಲಾವಣೆಯನ್ನು ಮಾಡಿದ್ದಾರೆ. ಇಂದು ಪ್ರಧಾನಿ ಮೋದಿ ಕೋವಿಡ್​ ಲಸಿಕೆ ವಿಚಾರದಲ್ಲಿ ದೇಶದ ಈ ನೂತನ ಸಾಧನೆಯ ಬಗ್ಗೆ ಮಾತನಾಡಲಿದ್ದಾರೆ.

ದೇಶವು ಇಂತದ್ದೊಂದು ಮೈಲಿಗಲ್ಲನ್ನು ದಾಟಿದ ಸಂಭ್ರಮದ ಪ್ರಯುಕ್ತ ಪ್ರಧಾನಿ ಮೋದಿ ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ಲಸಿಕೆ ಫಲಾನುಭವಿಗಳ ಜೊತೆಯಲ್ಲಿ ಪ್ರಧಾನಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿಗೆ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಕೂಡ ಸಾಥ್​ ನೀಡಿದ್ದರು.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...