alex Certify ಬಿಸಿಲ ಧಗೆಯಿಂದ ಪಾರಾಗಲು ʼಸ್ವಿಮ್ಮಿಂಗ್​​ ಪೂಲ್ʼ​​ಗಿಳಿದ ಆನೆಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಲ ಧಗೆಯಿಂದ ಪಾರಾಗಲು ʼಸ್ವಿಮ್ಮಿಂಗ್​​ ಪೂಲ್ʼ​​ಗಿಳಿದ ಆನೆಗಳು..!

ಆಗ್ರಾ – ದೆಹಲಿ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ವೈಲ್ಡ್​ ಲೈಫ್​​ ಎಸ್​​ಓಎಸ್​​ ಆನೆ ಸಂರಕ್ಷಣಾ ಕೇಂದ್ರದಲ್ಲಿ ಆನೆಗಳು ಬೇಸಿಗೆ ಧಗೆಯನ್ನ ಕಡಿಮೆ ಮಾಡಲು ಸ್ವಿಮ್ಮಿಂಗ್​ ಪೂಲ್​ನಲ್ಲಿ ಎಂಜಾಯ್​ ಮಾಡಿದ್ದು ಈ ದೃಶ್ಯ ನೋಡಿದ ನೆಟ್ಟಿಗರು ಫುಲ್​ ಫಿದಾ ಆಗಿದ್ದಾರೆ.

ಕಳೆದ ಒಂದು ವಾರದಿಂದ ಈ ಭಾಗದಲ್ಲಿ ತಾಪಮಾನ ತುಂಬಾನೇ ಅಧಿಕವಾಗಿದೆ. ಹೀಗಾಗಿ ಆನೆಗಳಿಗೆ ಇದು ತುಂಬಾನೇ ಕಷ್ಟ ಎನಿಸಿದೆ. ಹೀಗಾಗಿ ಈ ಪುಟ್ಟ ಆನೆಗಳು ಆರು ಅಡಿ ಆಳ ಹಾಗೂ 400 ಚದರ ಅಡಿ ಹೊಂದಿರುವ ಪೂಲ್​ನಲ್ಲಿ ಬೀಟ್​ ದ ಹೀಟ್​ ಎಂಬಂತೆ ಸಖತ್​ ಚಿಲ್​ ಮಾಡಿದೆ. ಈ ರೀತಿ ನೀರಿನಲ್ಲಿ ಇರೋದ್ರಿಂದ ಆನೆಗಳಿಗೆ ಸೆಖೆಯಿಂದ ಮುಕ್ತಿ ಸಿಗೋದು ಮಾತ್ರವಲ್ಲದೇ ಬೃಹತ್​ ಭಾರವನ್ನ ಹೊಂದಿರುವ ಆನೆಗಳ ಕಾಲುಗಳಿಗೆ ಆರಾಮದಾಯಕ ಎನಿಸುತ್ತದೆ.

ಹೊಸ ಇಂಗ್ಲೀಷ್​ ಶಬ್ದದ ಅರ್ಥ ವಿವರಿಸಲು ಮೋದಿಯವರ ಗಡ್ಡದ ಉದಾಹರಣೆ ನೀಡಿದ ಶಶಿ ತರೂರ್​..!

ಮಥುರಾದ ಆನೆಗಳ ಆಸ್ಪತ್ರೆ ಆನೆಗಳಿಗಾಗಿ ಭಾರತದ ಮೊದಲ ಜಂಬೋ ಹೈಡ್ರೋಥೆರಪಿ ಪೂಲ್​ ಅನ್ನು ಹೊಂದಿದೆ. ಇದು ಆನೆಗಳ ಕೀಲುಗಳು ಹಾಗೂ ಪಾದಗಳಿಗೆ ಪರಿಣಾಮಕಾರಿಯಾದ ಜಲಚಿಕಿತ್ಸೆಯನ್ನ ನೀಡುತ್ತದೆ. ಇದರಿಂದ ಆನೆಗಳಲ್ಲಿ ಸ್ನಾಯು ಹಾಗೂ ಕೀಲು ನೋವುಗಳು ಕಡಿಮೆ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...