alex Certify ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..!

ಪ್ರಾಣಿಗಳ ಮುದ್ದಾದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಸೌಮ್ಯ ಪ್ರಾಣಿ ಆನೆಗೆ ವಿಶೇಷ ಸ್ಥಾನ ಇದೆ. ದೈತ್ಯ ಜೀವಿಯ ಕೆಲವೊಂದು ತರಲೆ ವಿಡಿಯೋಗಳನ್ನು ನೋಡುವುದೇ ಮಜಾ. ಇದೀಗ ಆನೆಯೊಂದು ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಟೋಪಿಯನ್ನು ಕಿತ್ತುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ,  ಆನೆಯ ಮುಂದೆ ನಿಂತಿದ್ದ ಮಹಿಳೆ ಕ್ಯಾಮರಾಗೆ ಫೋಸ್ ನೀಡಿದ್ದಾಳೆ. ಈ ವೇಳೆ ಆಕೆ ಧರಿಸಿದ್ದ ಟೋಪಿಯನ್ನು ಆನೆ ಎತ್ತಿ ತನ್ನ ಬಾಯಿಯೊಳಗೆ ಹಾಕಿದೆ. ಈ ವೇಳೆ ಮಹಿಳೆ, ತನ್ನ ಸಹೋದರಿ ತನಗೆ ಟೋಪಿಯನ್ನು ಕೊಟ್ಟಿದ್ದಾಳೆ ಎಂದು ಉದ್ಗರಿಸುತ್ತಾಳೆ. ದಯವಿಟ್ಟು, ತನ್ನ ಟೋಪಿಯನ್ನು ಕೊಡಬಹುದೇ ಎಂದು ಆನೆಯನ್ನು ಕೇಳಿಕೊಂಡಿದ್ದಾಳೆ. ಆಶ್ಚರ್ಯಕರವಾಗಿ ಆನೆಯು ಬಾಯಿಯಿಂದ ಹೊರತೆಗೆದು ಟೋಪಿಯನ್ನು ಮರಳಿ ಮಹಿಳೆಗೆ ಕೊಟ್ಟಿದೆ.

ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.  ಆದರೆ, ವಿಡಿಯೋ ನೋಡಿದ್ರೆ ಇದು ಆನೆ ಅಭಯಾರಣ್ಯವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. 26 ಸೆಕೆಂಡುಗಳ ವಿಡಿಯೋ, ಸುಮಾರು 15 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಮುದ್ದಾದ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ,  ತಮಿಳುನಾಡಿನಲ್ಲಿ ರಕ್ಷಿಸಲ್ಪಟ್ಟ ಮರಿ ಆನೆಯೊಂದು ಅರಣ್ಯ ಅಧಿಕಾರಿಯನ್ನು ತಬ್ಬಿಕೊಳ್ಳುತ್ತಿರುವ ಹೃದಯಸ್ಪರ್ಶಿ ಚಿತ್ರವೊಂದು ವೈರಲ್ ಆಗಿತ್ತು. ಈ ಚಿತ್ರವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಟ್ವೀಟ್ ಮಾಡಿದ್ದರು.

— Funny Supply (@FunnySupply) December 13, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...