alex Certify ಗಣಪತಿ ವಿಸರ್ಜಿಸಿ ಬರುವಾಗ ಟ್ರ್ಯಾಕ್ಟರ್ ಗೆ ವಿದ್ಯುತ್ ಸ್ಪರ್ಶ: ಬಾಲಕ ಸಾವು, ಇಬ್ಬರು ಗಂಭೀರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಪತಿ ವಿಸರ್ಜಿಸಿ ಬರುವಾಗ ಟ್ರ್ಯಾಕ್ಟರ್ ಗೆ ವಿದ್ಯುತ್ ಸ್ಪರ್ಶ: ಬಾಲಕ ಸಾವು, ಇಬ್ಬರು ಗಂಭೀರ

ಹಾಸನ: ಗಣಪತಿ ವಿಸರ್ಜನೆ ಮಾಡಿ ಬರುವಾಗ ಟ್ರ್ಯಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶವಾಗಿದ್ದರಿಂದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅರಕಲಗೂಡು ಸಮೀಪದ ಕತ್ತಿಮಲ್ಲೇನಹಳ್ಳಿಯಲ್ಲಿ ಸೋಮವಾರ ಘಟನೆ ನಡೆದಿದೆ. 14 ವರ್ಷದ ಯಶವಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಮೋದ್ ಮತ್ತು ಮೋಹನ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಿ ಬರುವಾಗ ಟ್ರ್ಯಾಕ್ಟರ್ ಗೆ ಅಳವಡಿಸಿದ್ದ ಅಲಂಕೃತ ಬೋರ್ಡ್ ಗೆ ವಿದ್ಯುತ್ ತಂತಿ ತಗುಲಿದೆ.

ಟ್ರ್ಯಾಕ್ಟರ್ ನಲ್ಲಿ ಕುಳಿತಿದ್ದ 20ಕ್ಕೂ ಹೆಚ್ಚು ಯುವಕರು ಕೆಳಗೆ ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...