alex Certify Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ವಯಸ್ಸು ಎಂಬುದು ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಅದಕ್ಕೆ ಅನ್ವರ್ಥಕವಾಗಿ ಹಲವಾರು ವಯೋವೃದ್ಧರು ಸಾಧನೆ ಮಾಡುವುದನ್ನು ನಾವು ನೋಡಬಹುದು. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಹುರುಪಿನಿಂದ ನೃತ್ಯ ಮಾಡುವ ವಿಡಿಯೋಗಳು ವೈರಲ್​ ಆಗುತ್ತವೆ.

ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ವಯಸ್ಸಾದ ಮಹಿಳೆಯೊಬ್ಬರು ಹೃದಯದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಹೆಲ್ತ್ ಎಜುಕೇಟರ್ ಸ್ವಾತಿ ಜಗದೀಶ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಅಂತರ್ಜಾಲದಲ್ಲಿ ಮನಸ್ಸನ್ನು ಗೆದ್ದಿದೆ.

ಕೇರಳದ ಏತನೂರ್ ಕುಮ್ಮಟ್ಟಿ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹಬ್ಬದ ಸಂದರ್ಭದಲ್ಲಿ ಈ ವಿಡಿಯೋವನ್ನು ದೇವಸ್ಥಾನವೊಂದರಲ್ಲಿ ರೆಕಾರ್ಡ್ ಮಾಡಲಾಗಿದೆ. ಅಲಂಕೃತವಾದ ದೇವಾಲಯದ ದೃಶ್ಯವನ್ನು ವೀಡಿಯೊ ತೋರಿಸುತ್ತದೆ. ಕೆಲ ಕಲಾವಿದರು ಚೆಂಡ ಮೇಳವನ್ನು ಬಾರಿಸಿದರೆ, ದೂರದಲ್ಲಿ ನಿಂತಿದ್ದ ವೃದ್ಧೆ ಮನಮುಟ್ಟುವಂತೆ ನೃತ್ಯ ಮಾಡಿದ್ದನ್ನು ನೋಡಬಹುದು. ವೃದ್ಧೆಯ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...