alex Certify ಇದೇ ಅಲ್ವ ಮಾನವೀಯತೆ……! ಬೀದಿ ನಾಯಿಗಳಿಗೆ ಹಸಿವು ನೀಗಿಸುವ ಹಿರಿಯ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಅಲ್ವ ಮಾನವೀಯತೆ……! ಬೀದಿ ನಾಯಿಗಳಿಗೆ ಹಸಿವು ನೀಗಿಸುವ ಹಿರಿಯ ವ್ಯಕ್ತಿ

ಹೃದಯ ಶ್ರೀಮಂತಿಕೆ ನಿಮ್ಮದಾಗಲು ನೀವು ಭಾರೀ ದುಡ್ಡು ಆಸ್ತಿ ಇಟ್ಟಿರಬೇಕೆಂದೇನಿಲ್ಲ. ಇಂಥ ಒಂದು ನಿದರ್ಶನದಲ್ಲಿ, ಹಿರಿಯ ನಾಗರಿಕರೊಬ್ಬರು ಬೀದಿ ನಾಯಿಗೆ ಆಹಾರ ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಈ ಕ್ಲಿಪ್‌ಅನ್ನು ಐಪಿಎಸ್‌ ಅಧಿಕಾರಿ ದೀಪಾನ್ಷು ಕಬ್ರಾ ಶೇರ್‌ ಮಾಡಿದ್ದಾರೆ. ಬೇಯಿಸಿದ ಅನ್ನವನ್ನು ತಮ್ಮ ಬೈಸಿಕಲ್‌ನಲ್ಲಿ ತೆಗೆದುಕೊಂಡು ಹೋಗುವ ಈತ ಅವುಗಳಿಗೆ ಅನ್ನ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ದೀಪಿಕಾ ಚಿತ್ರದಲ್ಲಿ ಕಾಣಿಸಿಕೊಂಡ ಸಹೋದರಿ ಅನಿಶಾ…!

ಪ್ರತಿಯೊಬ್ಬರಿಗೂ ಮಾನವೀಯತೆ ತೋರುವ ಕ್ಷಮತೆಯನ್ನು ದೇವರು ಕೊಟ್ಟಿರುತ್ತಾನೆ ಎಂದು ಕಬ್ರಾ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟು ಶೇರ್‌ ಮಾಡಿದ್ದಾರೆ. ಆನ್ಲೈನ್‌ನಲ್ಲಿ ಶೇರ್‌ ಮಾಡುತ್ತಲೇ 37 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಇವರ ಮಾನವೀಯ ಗುಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

“ಗ್ರೇಟ್, ಅವರು ದೇವರು ಕೊಟ್ಟ ಜೀವನದ ಉದ್ದೇಶವನ್ನು ಸಾಕಾರಗೊಳಿಸಿದ್ದಾರೆ. ಸಮಾಜಕ್ಕೆ ಏನನ್ನಾದರೂ ಒಳಿತು ಮಾಡಬೇಕು, ಸೂಂದರವಾದ ವಿಡಿಯೋ,” ಎಂದು ನೆಟ್ಟಿಗೊಬ್ಬರು ಅವರನ್ನು ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...