alex Certify BIG NEWS: ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಮತ್ತೆ ಶುರು ಉಚಿತ ಇ-ಕೆವೈಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಡಿತರ ಚೀಟಿದಾರರಿಗೆ ಮುಖ್ಯ ಮಾಹಿತಿ: ಮತ್ತೆ ಶುರು ಉಚಿತ ಇ-ಕೆವೈಸಿ

ಹಾಸನ: ಪಡಿತರ ಚೀಟಿದಾರರ ಮಾಹಿತಿಗಳನ್ನು ಉನ್ನತೀಕರಿಸಲು 2019 ಜೂನ್ ಮಾಹೆಯಿಂದ ಫೆಬ್ರವರಿ-2020 ರ ಮಾಹೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಕಾರ್ಯಕ್ರಮವನ್ನು ನಡೆಸಲಾಗಿತ್ತು.

ಕೋವಿಡ್-19 ರ ಹಿನ್ನೆಲೆಯಲ್ಲಿ ಇ-ಕೆವೈಸಿ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 14,81,407 ಪಡಿತರ ಚೀಟಿ ಸದಸ್ಯರಲ್ಲಿ 8,90,064 ಸದಸ್ಯರ ಇ-ಕೆವೈಸಿ ಪೂರ್ಣಗೊಂಡಿದ್ದು, ಇನ್ನುಳಿದ 5,91,343 ಸದಸ್ಯರ ಇ-ಕೆವೈಸಿ ಪೂರ್ಣಗೊಂಡಿರುವುದಿಲ್ಲ.

ಇದೀಗ ಸರ್ಕಾರವು ಪಡಿತರ ಚೀಟಿದಾರರ ಇ-ಕೆವೈಸಿ ಮರು ಪ್ರಾರಂಭಿಸಲು ನಿರ್ದೇಶಿಸಿರುವುದರಿಂದ ಇ-ಕೆವೈಸಿ ನೀಡದ ಪಡಿತರ ಚೀಟಿಯ ಸದಸ್ಯರು ಕುಟುಂಬದ ಮುಖ್ಯಸ್ಥರ ವಿವರ, ಸಂಬಂಧ, ಲಿಂಗ, ಜಾತಿ (ಎಸ್.ಸಿ/ಎಸ್.ಟಿ/ಇತರೆ), ಎಲ್‍ಪಿಜಿ ವಿವರ, ಹಾಗೂ ಕನಿಷ್ಟ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆಗಳನ್ನು ನೀಡಿ ತುರ್ತಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...