alex Certify ಟಾಲಿವುಡ್ ನಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲಿರುವ ಸಲಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಾಲಿವುಡ್ ನಲ್ಲಿ ಖಡಕ್ ವಿಲನ್ ಆಗಿ ಅಬ್ಬರಿಸಲಿರುವ ಸಲಗ

ಚಂದನವನದಲ್ಲಿ ಸಾಕಷ್ಟು ಹೆಸರು ಮಾಡಿರುವ ದುನಿಯಾ ವಿಜಯ್ ಗೆ ಈಗ ಮತ್ತೊಂದು ಹೊಸ ಅವಕಾಶ ಸಿಕ್ಕಿದ್ದು, ಟಾಲಿವುಡ್ ನಲ್ಲಿ ವಿಲನ್ ಆಗಿ ಅಬ್ಬರಿಸುವ ಅವಕಾಶ ಸಿಕ್ಕಿದೆ.

ಈಗಾಗಲೇ ದುನಿಯಾ ವಿಜಯ್ ಚಂದನವನಕ್ಕೆ ಕಾಲಿಟ್ಟು 14 ವರ್ಷಗಳಾಗಿವೆ. ಈಗ ಮತ್ತೊಂದು ಪಯಣ ಆರಂಭಿಸಿದ್ದು, ಟಾಲಿವುಡ್ ಗೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ದುನಿಯಾ ವಿಜಯ್ ಅಭಿನಯಿಸಿದ ಸಲಗ ಚಿತ್ರ ಯಶಸ್ವಿಯಾಗಿದ್ದು, ಅಭಿಮಾನಿಗಳ ಮನಸ್ಸು ಗೆದ್ದಿದೆ. ಈ ಚಿತ್ರದಲ್ಲಿ ನಾಯಕ ನಟ ಹಾಗೂ ನಿರ್ದೇಶಕನಾಗಿ ದುನಿಯಾ ವಿಜಯ್ ಮಿಂಚಿದ್ದರು.

ಸಲಗ ಚಿತ್ರದ ಬಿಡುಗಡೆ ಸಂದರ್ಭದಲ್ಲಿಯೇ ಹೀಗೊಂದು ಸುದ್ದಿ ಹಬ್ಬಿತ್ತು. ಆದರೆ, ಈಗ ಸ್ವತಃ ದುನಿಯಾ ವಿಜಯ್ ಅವರೇ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ ರಗಡ್ ನಲ್ಲಿ ಖಳನಾಯಕನ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ.

ನನ್ನ 14 ವರ್ಷದ ಸಿನಿ ಪಯಣದಲ್ಲಿ ಒಂದೊಂದೆ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದೇನೆ. ಸಲಗ ನನ್ನನ್ನು ಮತ್ತಷ್ಟು ಬೆಳೆಸಿತು. ಈಗ ಟಾಲಿವುಡ್ ನಲ್ಲಿಯೂ ನಾನು ಖಳನಾಯಕನ ಪಾತ್ರ ಮಾಡುತ್ತಿದ್ದೇನೆ. ನನಗೆ ಎಲ್ಲ ಪಾತ್ರಗಳೂ ಒಂದೇ. ಯಾವುದೇ ಪಾತ್ರ ಇದ್ದರೂ ಸರಿ, ನಾನು ಒಂದೇ ಪಾತ್ರಕ್ಕೆ ಅಂಟಿ ಕುಳಿತುಕೊಳ್ಳುವುದಿಲ್ಲ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...