alex Certify 50ನೇ ವಸಂತಕ್ಕೆ ಕಾಲಿಟ್ಟ ನಟ ದುನಿಯಾ ವಿಜಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50ನೇ ವಸಂತಕ್ಕೆ ಕಾಲಿಟ್ಟ ನಟ ದುನಿಯಾ ವಿಜಯ್

Duniya Vijay: ಜೈಲಿನಿಂದ 6 ಖೈದಿಗಳ ಬಿಡುಗಡೆ ಮಾಡಿದ ದುನಿಯಾ ವಿಜಯ್ | sandalwood actor duniya vijay helps to release of 6 prisoners – News18 ಕನ್ನಡ

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂದೆ – ತಾಯಿ ಸಮಾಧಿಯ ಬಳಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದಾಗಿ ಈಗಾಗಲೇ  ವಾಹಿನಿ ಒಂದರಲ್ಲಿ ತಿಳಿಸಿದ್ದು, ಕಟೌಟ್ ಮತ್ತು ಬ್ಯಾನರ್ ಅಂತ ಹಣ ಖರ್ಚು ಮಾಡಬೇಡಿ ಎಂದು ಅವರ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

2004ರಲ್ಲಿ ತೆರೆಕಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ರಂಗ sslc’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ  ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ದುನಿಯಾ ವಿಜಯ್, ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ‘ಪಾಪ ಪಾಂಡು’ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಕ್ಕು ನಲಿಸಿದ್ದಾರೆ.

2007 ರಂದು ‘ದುನಿಯಾ’ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ನಟಿಸಿದರು. ಈ ಚಿತ್ರ ಭರ್ಜರಿ ಯಶಸ್ಸು ಕಾಣುವ ಮೂಲಕ ಹೊಸ ದಾಖಲೆ ಬರೆಯಿತು. ಇತ್ತೀಚೆಗೆ ನಿರ್ದೇಶಕನಾಗಿಯು ಮಿಂಚುತ್ತಿರುವ ದುನಿಯಾ ವಿಜಯ್ ಅವರ ‘ಭೀಮ’ ಸಿನಿಮಾ ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದರ ಬೆನ್ನಲ್ಲೇ ಅವರ 29 ನೇ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...