alex Certify ಟ್ರಕ್ ಚಾಲಕನ‌ ಚಾಕಚಕ್ಯತೆಗೆ ನೆಟ್ಟಿಗರು ಫಿದಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಕ್ ಚಾಲಕನ‌ ಚಾಕಚಕ್ಯತೆಗೆ ನೆಟ್ಟಿಗರು ಫಿದಾ…..!

ಒಬ್ಬೊಬ್ಬರಿಗೂ ಒಂದೊಂದು ವಿಷಯದಲ್ಲಿ ಚಾಕಚಕ್ಯತೆ ಇರುತ್ತದೆ ಎಂಬ ಮಾತು ಇದೆ. ಇಲ್ಲೊಬ್ಬ ಟ್ರಕ್ ಚಾಲಕ ತನ್ನ ಫರ್ಫೆಕ್ಷನ್ ಚಾಲನೆಯಿಂದ ಗಮನ ಸೆಳೆದ ವಿಡಿಯೋ ವೈರಲ್ ಆಗಿದೆ.

ಟ್ರಾಫಿಕ್ ಕೋನ್ ಮೇಲೆ ಇಟ್ಟಂತಹ ಒಂದು ಲೋಟ ಬಿಸಿನೀರಿನಲ್ಲಿ ಟ್ರಕ್‌ಗೆ ಕಟ್ಟಲ್ಪಟ್ಟ ಟೀ ಬ್ಯಾಗ್ ಅನ್ನು ಸಲೀಸಾಗಿ ಮುಳುಗಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಚಾಲಕ ಕೆಲ ಸಮಯದಿಂದ ಅಭ್ಯಾಸ ಮಾಡಿರುವಂತೆ ಕಾಣುತ್ತದೆ. ಏಕೆಂದರೆ  ಅತ್ಯಂತ ನಿಖರವಾಗಿ ಮಾಡಲಾಗಿದೆ.

ಜೋಹಾನ್ ಗ್ರೊಟೆಬೊರ್ ಎಂಬ ಡಚ್ ಟ್ರಕ್ಕರ್ ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಐವತ್ತು ಸಾವಿರ ರೂ. ಹೂಡಿ, 3300 ಪಿಂಚಣಿ ಪಡೀರಿ; ಇದು ಇಂಡಿಯಾ ಪೋಸ್ಟ್ ಪೆನ್ಷನ್ ಸ್ಕೀಂ‌

ಈ ಹಿಂದೆ, ಕೆಲವು ಫಿನ್ನಿಷ್ ಚಾಲಕರು ‘ಟೀಬ್ಯಾಗ್ ಚಾಲೆಂಜ್’ ಅಡಿಯಲ್ಲಿ ಅದೇ ರೀತಿ ಮಾಡುವುದನ್ನು ಅವರು ನೋಡಿದ್ದರು. ಅವರಿಗೆ ಸ್ಪಷ್ಟವಾಗಿ ಸ್ಫೂರ್ತಿ, ಅವರು ತಮ್ಮ 82 ಅಡಿ ಉದ್ದದ ಎಚ್ ಎಚ್ ವಿ‌ ಯೊಂದಿಗೆ ಸಾಧನೆ ಮಾಡುವ ಮೂಲಕ ವೈರಲ್ ಟ್ರೆಂಡ್‌ಗೆ ಕೊಡುಗೆ ನೀಡಲು ನಿರ್ಧರಿಸಿದರು.

ಟ್ರಕ್ ಹಿಮ್ಮುಖವಾಗಿ ಚಲಿಸುವಾಗ ಟ್ರಾಫಿಕ್ ಕೋನ್‌ಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕಿತ್ತು. ಬಳಿಕ ಯಾಂತ್ರಿಕವಾಗಿ ಚಹಾ ಬ್ಯಾಗ್ ಅನ್ನು ನೇರವಾಗಿ ಬಿಸಿನೀರಿನಲ್ಲಿ ಬಿಡಬೇಕು. ಇದೊಂದು ಸಾಹಸವೇ ಸರಿ.

ಈ ವಿಡಿಯೋ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಇಲ್ಲಿಯವರೆಗೆ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

#theabagchallenge# accepted ?Met Maarten Ebrecht ?

Posted by Johan Groteboer on Wednesday, July 21, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...