alex Certify ತೂಕ ಇಳಿಸಲು ಸಹಕಾರಿ ಬೆಲ್ಲ ಸೇರಿಸಿ ಕುಡಿಯೋ ಬೆಚ್ಚನೆ ನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಸಹಕಾರಿ ಬೆಲ್ಲ ಸೇರಿಸಿ ಕುಡಿಯೋ ಬೆಚ್ಚನೆ ನೀರು

ಸಕ್ಕರೆಯ ಬದಲಾಗಿ ಬೆಲ್ಲವನ್ನ ಅಡುಗೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಕಬ್ಬಿನಿಂದ ತಯಾರು ಮಾಡುವ ಈ ಬೆಲ್ಲವು ಸಕ್ಕರೆಗೆ ಹೋಲಿಸಿದ್ರೆ ಆರೋಗ್ಯಕ್ಕೆ ತುಂಬಾನೇ ಉಪಕಾರಿ. ವಿಶ್ವದಲ್ಲಿ ಶೇಕಡಾ 70ರಷ್ಟು ಬೆಲ್ಲವನ್ನ ಭಾರತದಲ್ಲೇ ಉತ್ಪಾದನೆ ಮಾಡಲಾಗುತ್ತೆ.

ಈ ಬೆಲ್ಲವನ್ನ ಬೆಚ್ಚನೆಯ ನೀರಿನಲ್ಲಿ ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಉಪಯೋಗ ಇದೆ.

ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ : ಬೆಲ್ಲದಲ್ಲಿ ಬಿ1, ಬಿ6 ಹಾಗೂ ಸಿ ಪ್ಲಸ್​ ಜೀವಸತ್ವಗಳು ಅಗಾಧ ಪ್ರಮಾಣದಲ್ಲಿದೆ. ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚನೆಯ ನೀರಿಗೆ ಬೆಲ್ಲವನ್ನ ಮಿಶ್ರಣ ಮಾಡಿ ಸೇವನೆ ಮಾಡೋದ್ರಿಂದ ಜೀರ್ಣಕ್ರಿಯೆ ಶಕ್ತಿ ಹೆಚ್ಚಲಿದೆ.

ತೂಕ ಇಳಿಸಲು ಸಹಕಾರಿ : ಸಿಹಿ ತಿಂಡಿಗಳನ್ನ ತಿನ್ನೋದ್ರಿಂದ ದೇಹದ ತೂಕ ಹೆಚ್ಚಾಗುತ್ತೆ ಅಂತಾರೆ. ಆದರೆ ಈ ಬೆಲ್ಲದ ನೀರು ಸೇವನೆ ಮಾಡೋದ್ರಿಂದ ದೇಹದಲ್ಲಿ ತೂಕ ಇಳಿಕೆಯಾಗಲಿದೆ. ಬೆಲ್ಲದಲ್ಲಿರುವ ಪೋಟ್ಯಾಶಿಯಂ ಅಂಶ ದೇಹದಲ್ಲಿ ಎಲೆಕ್ಟ್ರೋಲೈಟ್​ ಅಂಶವನ್ನ ಸರಿದೂಗಿಸುತ್ತೆ.

ಅನೀಮಿಯಾ ವಿರುದ್ಧ ಪರಿಣಾಮಕಾರಿ : ನಿಮ್ಮ ರಕ್ತ ಕಣದಲ್ಲಿ ಹಿಮೋಗ್ಲೋಬಿನ್​ ಅಂಶ ಕಡಿಮೆಯಾಗಿದ್ದರೆ ಈ ಬೆಲ್ಲದ ನೀರು ಸೇವನೆ ಮಾಡೋದ್ರಿಂದ ಅನೀಮಿಯಾ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

ಸಂಧಿವಾತ ಸಮಸ್ಯೆಯಿಂದ ಮುಕ್ತಿ : ಬೆಲ್ಲದ ಸೇವನೆಯಿಂದ ದೇಹದಲ್ಲಿರುವ ಮೂಳೆಗಳಿಗೆ ಶಕ್ತಿ ಹೆಚ್ಚುತ್ತೆ, ಸಂಧಿವಾತದ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.

ರಕ್ತದೊತ್ತಡ ಸಮಸ್ಯೆಗೆ ಪರಿಹಾರ : ಬೆಲ್ಲದಲ್ಲಿರುವ ಪೋಟ್ಯಾಶಿಯಂ ಹಾಗೂ ಸೋಡಿಯಂ ಅಂಶ ರಕ್ತದೊತ್ತಡ ಸಮಸ್ಯೆಗೆ ಪರಿಹಾರ ನೀಡಬಲ್ಲುದು. ಹೀಗಾಗಿ ಬೆಚ್ಚನೆಯ ನೀರಿನೊಂದಿಗೆ ಬೆಲ್ಲವನ್ನ ಸೇವಿಸೋದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...