alex Certify ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್

ಮಲಬದ್ಧತೆ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಬಿಸಿ ನೀರು ಕುಡಿದರೂ, ಯಾವುದೇ ರೀತಿಯ ಆಹಾರ ತಿಂದರೂ ಸರಿಯಾಗಿ ಜೀರ್ಣಕ್ರೀಯೆ ಆಗದೇ ತೊಂದರೆ ಕೊಡುತ್ತಿರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ ಮಲವಿಸರ್ಜನೆ ಆದರೆ ಮಾತ್ರ ದೇಹದ ಆರೋಗ್ಯ ಚೆನ್ನಾಗಿರುತ್ತದೆ. ಸುಲಭವಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.

ಊಟವಾಗಿ ಅರ್ಧ ಗಂಟೆ ಬಳಿಕ ಒಂದು ಬೌಲ್ ಗೆ 2 ಚಮಚ ಬೆಲ್ಲ ಹಾಕಿ ಅದಕ್ಕೆ 2 ಟೀ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದನ್ನು ತಿನ್ನಿರಿ ಇದರಿಂದ ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ.

ಇನ್ನು ಖರ್ಬೂರ ಹಣ್ಣಿನಲ್ಲಿ ಸಾಕಷ್ಟು ಫೈಬರ್ ಅಂಶವಿರುತ್ತದೆ. ಇದನ್ನು ಮಧ್ಯಾಹ್ನ 3 ಅಥವಾ ನಾಲ್ಕು ಗಂಟೆಯ ಹೊತ್ತಿನಲ್ಲಿ ಕತ್ತರಿಸಿಕೊಂಡು ಚೆನ್ನಾಗಿ ಜಗಿದು ತಿನ್ನಿರಿ.

ಎಳ್ಳು ಕೂಡ ಮಲಬದ್ಧತೆಯನ್ನು ನಿವಾರಿಸುವಲ್ಲಿ ಸಹಾಯಕಾರಿಯಾಗಿದೆ. ಮನೆಯಲ್ಲಿ ಮಾಡುವ ರೋಟಿ, ಚಪಾತಿಗೆ ಸ್ವಲ್ಪ ಎಳ್ಳನ್ನು ಬೆರೆಸಿರಿ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...