alex Certify ರಾಣಿ ಸಾವಿಗೆ ಜನರು ಶೋಕಿಸುತ್ತಿರುವಾಗ ಅರಮನೆ ಮೇಲೆ ಮೂಡಿದ ಡಬಲ್ ಕಾಮನಬಿಲ್ಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಣಿ ಸಾವಿಗೆ ಜನರು ಶೋಕಿಸುತ್ತಿರುವಾಗ ಅರಮನೆ ಮೇಲೆ ಮೂಡಿದ ಡಬಲ್ ಕಾಮನಬಿಲ್ಲು…!

ಬ್ರಿಟನ್​ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ರಾಣಿ ಎಲಿಜಬೆತ್​ 2, ಸೆಪ್ಟೆಂಬರ್​ 8ರಂದು ಸ್ಕಾಟ್ಲೆಂಡ್​ನಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಹೀಗಾಗಿ ನೂರಾರು ಜನರು ಬಕಿಂಗ್​ಹ್ಯಾಮ್​ ಅರಮನೆಯ ಹೊರಗೆ ರಾಣಿಗೆ ಅಂತಿಮ ಗೌರವ ಸಲ್ಲಿಸಲು ಜಮಾಯಿಸಿದ್ದರು.

ಈ ವೇಳೆ ಆಕಾಶದಲ್ಲಿ ಅಪರೂಪದ ಡಬಲ್​ ಕಾಮನ್ ಬಿಲ್ಲು ಕಂಡು ಬಂದಾಗ ಜನರು ಸಂರ್ಪೂಣವಾಗಿ ದಿಗ್ಭ್ರಮೆಗೊಂಡರು. ಅಲ್ಲಿ ನೆರೆದಿದ್ದವರು ಚಿತ್ರಗಳನ್ನು ತೆಗೆದು ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಾವಿನ ಘೋಷಣೆ ಮಾಡುವ ಮೊದಲು ಒಂದು ಕಾಮನಬಿಲ್ಲು ಕಾಣಿಸಿಕೊಂಡಿತ್ತು, ಲಂಡನ್​ನ ಹೊರಗಿನ ವಿಂಡ್ಸರ್​ ಕ್ಯಾಸಲ್​ ನಿವಾಸದಲ್ಲಿ ಧ್ವಜವನ್ನು ಇಳಿಸಿದಾಗ ರಾಣಿಯ ಮರಣದ ನಂತರ ಮತ್ತೊಂದು ಕಾಮನ ಬಿಲ್ಲು ಬಂದಿತು ಎಂದು ವರದಿಯಾಗಿದೆ.

ಬಕಿಂಗ್ಹ್ಯಾಮ್​ ಅರಮನೆಯ ಮೇಲೆ ಎರಡು ಕಾಮನಬಿಲ್ಲು ಕಾಣಿಸಿದ್ದು ಜೀವನದಲ್ಲಿ ರೂಪಾಂತರವನ್ನು ಸಂಕೇತಿಸುತ್ತದೆ ಎಂದು ಸ್ಥಳೀಯ ಪತ್ರಕರ್ತರು ಬರೆದುಕೊಂಡಿದ್ದಾರೆ.

ಎಲಿಜಬೆತ್​ ಅವರನ್ನು ಗೌರವಿಸಲು ಜನಸಮೂಹ ಸೇರುತ್ತಿರುವಾಗ ಬಕಿಂಗ್ಹ್ಯಾಮ್​ ಅರಮನೆಯ ಮೇಲೆ ಕಾಮನ ಬಿಲ್ಲು ಕಾಣಿಸಿಕೊಂಡಿದ್ದು, ಇದು ದೇವರ ಸಂಕೇತವಾಗಿದೆ ಎಂದು ಲೇಖಕ ಮೇಗನ್​ ಬಾಶ್ಮನ್​ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...