alex Certify ಅನಗತ್ಯ ಔಷಧಿ ವಿಲೇವಾರಿ ಮಾಡುವಲ್ಲಿ ನೀವೆಷ್ಟು ಎಡವುತ್ತಿದ್ದೀರಿ ಗೊತ್ತೇ..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯ ಔಷಧಿ ವಿಲೇವಾರಿ ಮಾಡುವಲ್ಲಿ ನೀವೆಷ್ಟು ಎಡವುತ್ತಿದ್ದೀರಿ ಗೊತ್ತೇ..? ಇಲ್ಲಿದೆ ಮಾಹಿತಿ

ಈಗಿನ ಕಾಲದಲ್ಲಿ ಔಷಧಿಗಳು ಇಲ್ಲದ ಮನೆಯೇ ಇಲ್ಲ. ಎಷ್ಟೋ ಜನರ ಮನೆಯ ಡ್ರಾವರ್​ಗಳಲ್ಲಿ ಅನಗತ್ಯವಾದ, ಅವಧಿ ಮೀರಿದಿ ಹಾಗೂ ಬಳಕೆಯಾಗದ ಔಷಧಿಗಳು ಹಾಗೆಯೇ ಬಿದ್ದಿರುತ್ತದೆ. ನೀವು ಕೆಲವೊಂದು ಔಷಧಿಗಳನ್ನು ಬಳಕೆ ಮಾಡಲು ಇಚ್ಛಿಸದಿದ್ದರೆ ಅಥವಾ ಅವುಗಳು ಅವಧಿ ಮೀರಿದ್ದರೆ ಏನು ಮಾಡಬಹುದು ಎಂಬ ಯೋಚನೆ ಮಾಡಿರಬಹುದು.

ಅವುಗಳನ್ನು ಕಸದ ಬುಟ್ಟಿಗೆ ಹಾಕುವುದೋ ಅಥವಾ ಶೌಚಾಲಯಗಳಲ್ಲಿ ಫ್ಲಶ್​ ಮಾಡುವ ಕೆಲಸ ಮಾಡುವವರೂ ಅನೇಕರಿದ್ದಾರೆ. ಆದರೆ ಈ ರೀತಿ ಮಾಡೋದ್ರಿಂದ ಪರಿಸರದ ಮೇಲೆ ಅದು ಎಷ್ಟರ ಮಟ್ಟಿಗೆ ದುಷ್ಪರಿಣಾಮ ಬೀರಬಹುದು ಎಂದು ಎಂದಾದರೂ ಯೋಚಿಸಿದ್ದೀರಾ..?

ಆರೋಗ್ಯ ಸುಧಾರಣೆ ಮಾಡಬೇಕೆಂಬ ಸಕಾರಾತ್ಮಕ ಉದ್ದೇಶದಿಂದ ಔಷಧಿಗಳನ್ನು ಕಂಡುಹಿಡಿಯಲಾಗುತ್ತದೆ. ಆದರೆ ಗೊತ್ತಿಲ್ಲದೇ ಯಾವುದ್ಯಾವುದೇ ಔಷಧಿಗಳನ್ನ ತೆಗೆದುಕೊಂಡರೆ ಅದು ಖಂಡಿತವಾಗಿಯೂ ಅಪಾಯಕಾರಿ ಎನಿಸುತ್ತದೆ. ಅಲ್ಲದೇ ಇದು ಜೀವಕ್ಕೇ ಮಾರಕ ಕೂಡ ಆಗಬಹುದು. ಹೀಗಾಗಿ ಅನಗತ್ಯ ಔಷಧಿಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬೇಕು. ಇದರಿಂದ ಗೊತ್ತೋ ಗೊತ್ತಿಲ್ಲದೆಯೋ ಇನ್ನೊಬ್ಬರು ಈ ಔಷಧಿಗಳನ್ನು ಸೇವನೆ ಮಾಡಿ ಅಪಾಯಕ್ಕೆ ಸಿಲುಕುವುದು ಸಹ ತಪ್ಪುತ್ತದೆ.

ಅವಧಿ ಮೀರಿದ ಔಷಧಿಗಳ ವಿಲೇವಾರಿ ಸರಿಯಾದ ರೀತಿಯಲ್ಲಿ ಮಾಡದೇ ಹೋದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದು ಜಲಚರ ಜೀವಿಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾದ್ರೆ ನೀವು ಅನಗತ್ಯ ಔಷಧಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ಅಗತ್ಯವಾಗಿ ನೆನಪಿಟ್ಟುಕೊಳ್ಳಬೇಕು:

ನೀವು ನಿಮಗೆ ಬೇಡವಾದ ಔಷಧಿಗಳನ್ನು ಸುಟ್ಟು ಹಾಕಬಹುದು. ಇದು ಔಷಧಿಗಳನ್ನು ವಿಲೇವಾರಿ ಮಾಡುವ ಅತ್ಯಂತ ಸುರಕ್ಷಿತ ವಿಧಾನವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಔಷಧಿಗಳನ್ನು ಸಂಗ್ರಹಿಸುವ ಕೇಂದ್ರ ಸಿಗುತ್ತದೆ. ಇಲ್ಲಿ ಕೂಡ ನೀವು ಬೇಡದ ಔಷಧಿಗಳನ್ನು ವಿಲೇವಾರಿ ಮಾಡಬಹುದು.

ಇದು ಯಾವುದೂ ಸಾಧ್ಯವಿಲ್ಲ ಎಂದಾದಾಗ ಅನೇಕರು ಕಸದ ಗಾಡಿಗೆ ಹಾಕುವುದೋ ಅಥವಾ ಶೌಚಾಲಯದಲ್ಲಿ ಫ್ಲಶ್​ ಮಾಡುವುದನ್ನೋ ಮಾಡುತ್ತಾರೆ. ಇದರಿಂದ ನಿಮಗೆ ಹಾನಿಯುಂಟಾಗುತ್ತದೆ

ಔಷಧಿಗಳನ್ನು ಶೌಚಾಲಯದಲ್ಲಿ ಫ್ಲಶ್​ ಮಾಡವುದು ನಿಜಕ್ಕೂ ಒಳ್ಳೆಯ ಅಭ್ಯಾಸವಲ್ಲ. ಏಕೆಂದರೆ ಇದು ಪುನಃ ನಮ್ಮ ಪರಿಸರವನ್ನೇ ಸೇರುತ್ತದೆ. ಔಷಧಿಗಳ ತಯಾರಿಕೆಗೆ ಬಳಸಿದ ರಾಸಾಯನಿಕಗಳು ನೀರಿಗೆ ಸೇರುತ್ತದೆ. ಇದು ಜಲಚರ ಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಕೆಲವೊಂದು ಔಷಧಿಗಳನ್ನು ಫ್ಲಶ್​ ಮಾಡಬಹುದು ಎಂದು ಲೇಬಲ್​ಗಳ ಮೇಲೆ ಬರೆದಿಡಲಾಗುತ್ತದೆ. ಅಂತಹ ಔಷಧಿಗಳನ್ನು ಮಾತ್ರ ನೀವು ಫ್ಲಶ್​ ಮಾಡಬಹುದಾಗಿದೆ.

ಔಷಧಿಗಳನ್ನು ವಿಲೇವಾರಿ ಮಾಡುವ ಮುನ್ನ ಮಾತ್ರೆಗಳನ್ನು ಎಂದಿಗೂ ಪುಡಿ ಮಾಡಬಾರದು. ಮಾತ್ರೆಗಳನ್ನು ಸೀಲ್​ ಮಾಡಿದ ಬ್ಯಾಗ್​ನಲ್ಲಿ ಹಾಕಿಯೇ ವಿಲೇವಾರಿ ಮಾಡಬೇಕು. ಸಿರಪ್​ಗಳ ಮೇಲೆ ಬರೆಯಲಾದ ಆರ್​ಎಕ್ಸ್​ ಸಂಖ್ಯೆ ಹಾಗೂ ಎಲ್ಲಾ ವೈಯಕ್ತಿಕ ಮಾಹಿತಿಗಳನ್ನು ಅಳಿಸಿ ಹಾಕಲು ಮರೆಯಬಾರದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...