alex Certify ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಯುರ್ವೇದದ ಪ್ರಕಾರ ಜ್ವರವಿದ್ದಾಗ ಒಬ್ಬ ವ್ಯಕ್ತಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನೋಡೋಣ.

ಚಳಿಗಾಲದಲ್ಲಿ ತಣ್ಣನೆಯ ಗಾಳಿಯಿಂದಾಗಿ ಜನರು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಜ್ವರ, ನೆಗಡಿ, ಕೆಮ್ಮು ನಮ್ಮನ್ನು ಕಾಡುತ್ತದೆ. ಹವಾಮಾನದಲ್ಲಿನ ಬದಲಾವಣೆ ಮತ್ತು ಕಡಿಮೆ ತಾಪಮಾನದಿಂದಾಗಿ ದೇಹದ ಉಷ್ಣತೆಯು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಜ್ವರ ಬಂದರೆ ಇನ್ನೂ ಹೆಚ್ಚು ಎಚ್ಚರಿಕೆಗಳನ್ನು ವಹಿಸಬೇಕು. ಆ ಸಮಯದಲ್ಲಿನ ಅಜಾಗರೂಕತೆ ಅನಾರೋಗ್ಯವನ್ನು ಹೆಚ್ಚಿಸಬಹುದು.

ತಣ್ಣೀರಿನಿಂದ ಸ್ನಾನ ಮಾಡಬೇಡಿ – ಜ್ವರವಿದ್ದಾಗ ತಣ್ಣೀರಿನಿಂದ ಸ್ನಾನ ಮಾಡಬೇಡಿ. ಸ್ನಾನ ಮಾಡಬೇಕೆಂದು ಅನಿಸಿದರೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್‌ ಬಾತ್‌ ಮಾಡಬಹುದು. ಜ್ವರ ಇರುವಾಗ ಬಿಸಿ ನೀರಿನ ಸ್ನಾನ ಸೂಕ್ತ. 2-3 ದಿನಗಳವರೆಗೆ ಸ್ನಾನ ಮಾಡದೇ ಇರುವುದು ಸಹ ಉತ್ತಮ.

ಎಲ್ಲಾ ಹಣ್ಣುಗಳನ್ನು ಸೇವಿಸಬೇಡಿ – ಜ್ವರದ ಸಮಯದಲ್ಲಿ ಕೆಲವೊಂದು ಹಣ್ಣುಗಳನ್ನು ತಿನ್ನಬಾರದು. ವಿಶೇಷವಾಗಿ ರಸಭರಿತ ಮತ್ತು ಹುಳಿ ಹಣ್ಣುಗಳು, ಬಾಳೆಹಣ್ಣು, ಕಲ್ಲಂಗಡಿ, ಕಿತ್ತಳೆ ಮತ್ತು ನಿಂಬೆ ಹಣ್ಣಿನ ಸೇವನೆಯನ್ನು ತಪ್ಪಿಸಬೇಕು.

ವ್ಯಾಯಾಮ ಮಾಡಬೇಡಿಜ್ವರದ ಸಮಯದಲ್ಲಿ ವ್ಯಾಯಾಮ ಮಾಡಬಾರದು. ವ್ಯಾಯಾಮದಿಂದ ದೇಹದ ಉಷ್ಣತೆ ಮತ್ತಷ್ಟು ಹೆಚ್ಚುತ್ತದೆ. ಇದರಿಂದ ಅಪಾಯವೂ ಆಗಬಹುದು. ಸಹಜವಾಗಿಯೇ ಜ್ವರವಿದ್ದಾಗ ದೇಹವು ದುರ್ಬಲವಾಗಿರುತ್ತದೆ, ಆ ಸಮಯದಲ್ಲಿ ವ್ಯಾಯಾಮ ಮಾಡುವುದು ಅಪಾಯಕಾರಿ.

ಮೊಸರು ತಿನ್ನಬೇಡಿ ಜ್ವರದಿಂದ ಬಳಲುತ್ತಿದ್ದಾಗ ಮೊಸರು ತಿನ್ನಬೇಡಿ.  ಮೊಸರು, ಮಜ್ಜಿಗೆ, ಲಸ್ಸಿ ಕುಡಿಯುವುದನ್ನು ತಪ್ಪಿಸಿ.

ಜ್ವರ ಬಂದಾಗ ಏನು ಮಾಡಬೇಕು ?

ಜ್ವರದ ಸಂದರ್ಭದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಇದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ತುಂಬಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ ಮತ್ತು ಮನೆಯ ಸುತ್ತಲೂ ಲಘುವಾಗಿ ವಾಕಿಂಗ್‌ ಮಾಡಿ.

ಜ್ವರದ ಸಂದರ್ಭದಲ್ಲಿ ಸೂಪ್ ಕುಡಿಯಬಹುದು. ಟೊಮೆಟೊ ಸೂಪ್, ಮಿಕ್ಸೆಡ್‌ ವೆಜ್ ಸೂಪ್ ಅಥವಾ ಮೂಂಗ್ ದಾಲ್ ಸೂಪ್ ಸೇವಿಸಿ. ಅಷ್ಟೇ ಅಲ್ಲ ಜ್ವರದಿಂದ ಬಳಲುತ್ತಿದ್ದಾಗ ಗರಿಷ್ಠ ವಿಶ್ರಾಂತಿ ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ನಿದ್ರಿಸುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...