alex Certify ನದಿಯಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿಯಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ರಕ್ಷಿಸಿದ ಶ್ವಾನ…! ವಿಡಿಯೋ ವೈರಲ್

ನಾಯಿಯೊಂದು ನೀರಿನಲ್ಲಿ ಮುಳುಗುತ್ತಿದ್ದ ಮತ್ತೊಂದು ನಾಯಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಾಯಿ ಪ್ರೇಮಿಗಳ ಮನ ಗೆದ್ದಿದೆ.

ನಾಯಿ ರೆಂಬೆಯನ್ನು ತರಲು ನದಿಗೆ ಜಿಗಿಯುತ್ತದೆ, ಆದರೆ ಅದು ನೀರಿನ ರಭಸಕ್ಕೆ ಸಮತೋಲನವನ್ನು ಕಳೆದುಕೊಂಡು ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತದೆ.

ಆದರೆ ಇದು ಕೇವಲ ಕ್ಷಣದಲ್ಲಿ ಅಲ್ಲೇ ಹತ್ತಿರದಲ್ಲಿ ನಿಂತಿದ್ದ ಸ್ನೇಹಿತನಿಂದ ಸಹಾಯವನ್ನು ಪಡೆಯುತ್ತದೆ. ವೀಡಿಯೊವನ್ನು ಗೇಬ್ರಿಯೆಲ್ ಕಾರ್ನೊ ಅವರು ಹಂಚಿಕೊಂಡಿದ್ದಾರೆ. ಇದು ಇಲ್ಲಿಯವರೆಗೆ 2 ಮಿಲಿಯನ್ ವೀಕ್ಷಣೆ ಗಳಿಸಿದೆ.

ಕೊಂಬೆಯ ತುಂಡನ್ನು ನದಿಗೆ ಎಸೆದವರು ಯಾರು ಎಂಬುದು ಸ್ಪಷ್ಟವಾಗಿಲ್ಲ. ದಡದ ಮೇಲಿದ್ದ ನಾಯಿ ಮಾತ್ರ ಕೊಚ್ಚಿಹೋಗುತ್ತಿದ್ದ ನಾಯಿಯ ಬಾಯಲ್ಲಿದ್ದ ಮರದ ಕೊಂಬೆಯನ್ನು ಕಚ್ಚಿಕೊಳ್ಳುವ ಮೂಲಕ ಕೊಚ್ಚಿ ಹೋಗುತ್ತಿದ್ದ ನಾಯಿಯನ್ನು ಎಳೆದು ಮೇಲೆ ಹಾಕುತ್ತದೆ.

ತನ್ನ ಸ್ನೇಹಿತನಿಗೆ ಸಹಾಯ ಮಾಡಿದ್ದಕ್ಕಾಗಿ ಕೆಲವರು ನಾಯಿಯನ್ನು ಶ್ಲಾಘಿಸಿದರೆ, ಇತರರು ಈ ವೀಡಿಯೊದ ಕೆಲವು ವಿಷಯ ಮನವರಿಕೆಯಾಗಲಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...