alex Certify ನಾಯಿಯ ಹುಸಿ ಮುನಿಸು: ಕ್ಯೂಟ್​ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯ ಹುಸಿ ಮುನಿಸು: ಕ್ಯೂಟ್​ ವಿಡಿಯೋ ವೈರಲ್​

ಗಂಡ-ಹೆಂಡತಿ ಅಥವಾ ಸ್ನೇಹಿತರು ಸಿಟ್ಟುಮಾಡಿಕೊಂಡಾಗ ಇನ್ನೊಬ್ಬರು ಬಂದು ರಮಿಸುವುದು ಮಾಮೂಲು. ಅಂಥ ಸಂದರ್ಭದಲ್ಲಿ ಇನ್ನೊಬ್ಬರು ತುಸು ಮುಂಗೋಪ ಮಾಡಿದಂತೆ ಮಾಡುವುದೂ ಮಾಮೂಲು. ಆದರೆ ಇದು ಕೇವಲ ಮನುಷ್ಯರಲ್ಲಿ ಅಲ್ಲ, ಪ್ರಾಣಿಗಳೂ ಮಾಡುತ್ತವೆ ಎಂದು ಹೇಳುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಒಂದು ನಾಯಿ ಸತ್ತಂತೆ ಮಲಗಿರುವುದನ್ನು ನೋಡಬಹುದು. ಇನ್ನೊಂದು ನಾಯಿ ಅದನ್ನು ಎಬ್ಬಿಸುತ್ತದೆ. ಎಷ್ಟೇ ಮಾಡಿದರೆ ಮಲಗಿದಂತೆ ನಟಿಸುತ್ತಿರುವ ನಾಯಿ ಏಳುವುದೇ ಇಲ್ಲ. ಇನ್ನೊಂದು ನಾಯಿ ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಅದು ಸೋಲುತ್ತದೆ.

ಇದನ್ನು ನೋಡಿದಾಗ ಬಹುಶಃ ನಾಯಿ ಸತ್ತು ಹೋಗಿದೆ ಎಂದೇ ಅಂದುಕೊಳ್ಳುವಂತಿದೆ. ಆದರೆ ನಂತರ ಮನುಷ್ಯನೊಬ್ಬ ಬಂದು ನಾಯಿಯ ಕಾಲು ಎಳೆಯುತ್ತಾನೆ. ಆಗ ನಾಯಿ ಹೆದರಿಕೆಯಿಂದ ಎದ್ದೆನೋ ಬಿದ್ದೆನೋ ಎಂದು ಓಡಿದಾಗಲೇ ತಿಳಿಯುವುದು ಅದು ನಾಟಕ ಮಾಡುತ್ತಿತ್ತು ಎಂದು.

ಈ ಕ್ಯೂಟ್​ ಮುನಿಸಿನ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದ್ದು, ಥರಹೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...