alex Certify Shocking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಪ್ರಕರಣ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಪ್ರಕರಣ ಬಯಲು

ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಸಹಪಾಠಿಗಳ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನ ಮಧುರೈನಲ್ಲಿ ಇದೇ ತೆರನಾದ ಆಘಾತಕಾರಿ ಘಟನೆ ನಡೆದಿದೆ.

ವೈದ್ಯನೊಬ್ಬನ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಧುರೈನ ಪಿಜಿಯಲ್ಲಿ ವಾಸವಿದ್ದು, ಇದೇ ಪಿಜಿಯಲ್ಲಿದ್ದ ಇತರ ಮಹಿಳೆಯರ ಸ್ನಾನ ಮಾಡುವ, ಬಟ್ಟೆ ಬದಲಿಸುವ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿ ಅದನ್ನು ತನ್ನ ಪ್ರಿಯಕರನಾಗಿದ್ದ ವೈದ್ಯನಿಗೆ ಕಳುಹಿಸಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

ರಾಮನಾಥಪುರಂ ನ ವೈದ್ಯ ಆಶಿಕ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಜನನಿ ಎಂಬಾಕೆ ಇಂತಹ ಹೀನ ಕೃತ್ಯ ಮಾಡಿದ್ದು, ಈ ವಿಡಿಯೋಗಳನ್ನು ಪ್ರಿಯಕರನೂ ಆಗಿದ್ದ ಆಶಿಕ್ ಗೆ ಕಳುಹಿಸಿದ್ದಾಳೆ. ಈಕೆಯ ನಡೆಯ ಬಗೆ ಅನುಮಾನಗೊಂಡಿದ್ದ ಕೆಲವರು ಈಕೆಯ ಮೊಬೈಲ್ ಪರಿಶೀಲಿಸಿದಾಗ ಈ ಕೃತ್ಯ ಬಯಲಾಗಿದೆ.

ಇದೀಗ ಠಾಣೆಗೆ ದೂರು ನೀಡಲಾಗಿದ್ದು, ವೈದ್ಯ ಆಶಿಕ್ ಹಾಗೂ ಆತನ ಗೆಳತಿ ಜನನಿಯನ್ನು ಬಂಧಿಸಿರುವ ಮಧುರೈನ ಅಣ್ಣಾ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...