alex Certify ಬೆಂಗಳೂರು ಕೆಫೆಯು ವಿನ್ಸೆಂಟ್​ ವ್ಯಾನ್​ ಗಾಗ್​ ವರ್ಣಚಿತ್ರವನ್ನು ಹೋಲುತ್ತಂತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಕೆಫೆಯು ವಿನ್ಸೆಂಟ್​ ವ್ಯಾನ್​ ಗಾಗ್​ ವರ್ಣಚಿತ್ರವನ್ನು ಹೋಲುತ್ತಂತೆ….!

ಮೊಬೈಲ್​ ಕ್ಯಾಮರಾ ಬಳಕೆ ಹೆಚ್ಚುತ್ತಿದ್ದಂತೆ ಆಹಾರ ಅಥವಾ ಕೆಲವು ಸೀನರಿಕ್​ ಸ್ಥಳಗಳ ಚಿತ್ರಗಳನ್ನು ಕ್ಲಿಕ್ಕಿಸಿದ ನಂತರ ಹೆಚ್ಚಿನವರು ಹವ್ಯಾಸಿ ಛಾಯಾಗ್ರಾಹಕರಾಗಿಬಿಟ್ಟಿದ್ದಾರೆ. ಆದರೆ, ಹೆಸರು ಹೇಳಲಿಚ್ಛಿಸದ ರೆಡ್ಡಿಟ್​ ಬಳಕೆದಾರರು ತೆಗೆದ ಚಿತ್ರವು ನೆಟ್ಟಿಗರಲ್ಲಿ ಸಾಕಷ್ಟು ಉನ್ಮಾದವನ್ನು ಸೃಷ್ಟಿಸಿದೆ. ಆ ಫೋಟೋ ನೆಟ್ಟಿಗರ ಪ್ರಕಾರ ವಿನ್ಸೆಂಟ್​ ವ್ಯಾನ್​ ಗಾಗ್​ ಅವರ ಐಕಾನಿಕ್​ ಪೇಂಟಿಂಗ್​ ಅನ್ನು ಹೋಲುತ್ತದೆ.

ಸಾಯಿ ಪ್ರೀತಂ ಎಂಬವರು ರೆಡ್ಡಿಟ್​ನ ಚಿತ್ರವನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದು, ಅದರೊಟ್ಟಿಗೆ ವಿನ್ಸೆಂಟ್​ ವ್ಯಾನ್​ ಗಾಗ್​ ಅವರ ಕೆಫೆ ಟೆರೇಸ್​ ಅಟ್​ ನೆೈಟ್​ ಎಂಬ ವರ್ಣಚಿತ್ರದ ಚಿತ್ರವನ್ನು ಸಹ ಪೋಸ್ಟ್​ ಮಾಡಿದ್ದಾರೆ.

ಅಪರಿಚಿತ ರೆಡ್ಡಿಟ್​ ಬಳಕೆದಾರರು ಕ್ಲಿಕ್​ ಮಾಡಿರುವ ಚಿತ್ರ ಬೆಂಗಳೂರಿನ ಕೋರಮಂಗಲದಲ್ಲಿರುವ ಕೆಫೆಯದ್ದಾಗಿದೆ. ಮತ್ತು ಇದು ನೆಟ್ಟಿಗರ ಪ್ರಕಾರ ಪ್ರಸಿದ್ಧ ಕಲಾವಿದನ 1888 ತೈಲ ವರ್ಣಚಿತ್ರಕ್ಕೆ ಹೋಲಿಕೆಯನ್ನು ಹೊಂದಿದೆ.

1888ರಲ್ಲಿ ವಿನ್ಸೆಂಟ್​ ವ್ಯಾನ್​ ಗಾಗ್​ ಅವರ ಪ್ರಸಿದ್ಧ ಚಿತ್ರಕಲೆ ‘ಕೆಫೆ ಟೆರೇಸ್​ ಅಟ್​ ನೈಟ್​’ ಅನ್ನು ರಚಿಸಿದ್ದರು.
ಈ ಪೋಟೊ ನೆಟ್ಟಿಗರನ್ನು ಪ್ರತಿಕ್ರಿಯೆ ಮಾಡುವಂತೆ ಪ್ರಚೋದಿಸಿತು. ಕೆಲವರು ಸಾಮ್ಯತೆ ಹತ್ತಿರದಲ್ಲಿದೆ ಎಂದರೆ ಕೆಲವರು ಒಪ್ಪಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...