alex Certify ಹುಟ್ಟು ಹಬ್ಬದ ದಿನವೇ ಕಿಚ್ಚ ಸುದೀಪ್ ‘ದಚ್ಚು’ ಬಗ್ಗೆ ಹೇಳಿದ್ದೇನು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟು ಹಬ್ಬದ ದಿನವೇ ಕಿಚ್ಚ ಸುದೀಪ್ ‘ದಚ್ಚು’ ಬಗ್ಗೆ ಹೇಳಿದ್ದೇನು ಗೊತ್ತಾ..?

ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಇಂದು 50ನೇ ವರ್ಷದ ಬರ್ತ್ ಡೇ ಸಂಭ್ರಮ . ಈ ಹಿನ್ನೆಲೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಸಂಭ್ರಮದ ಖುಷಿಯಲ್ಲಿರುವ ಸುದೀಪ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ನಟ ಸುದೀಪ್ ಕೆಲವು ದಿನಗಳ ಹಿಂದೆ ಸಂಸದೆ, ನಟಿ ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ, ಆ ಪಾರ್ಟಿಗೆ ದರ್ಶನ್ ಬರುತ್ತಾರೆಂದು ಮೊದಲೇ ಗೊತ್ತಿತ್ತು. ಆದರೂ ನಾನು ಅಲ್ಲಿಗೆ ಹೋಗಿದ್ದೆ ಎಂದಿದ್ದಾರೆ. ಪಾರ್ಟಿಯಲ್ಲಿ ಸಿಕ್ಕ ತಕ್ಷಣ ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ, ಎಲ್ಲವೂ ಸರಿ ಹೋಗಬೇಕು ಎಂದು ಅಂದುಕೊಂಡಾಗ ಸರಿ ಆಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.

ಬೆಂಗಳೂರಿನ ಹೊಸಕೆರೆಹಳ್ಳಿ ಬಳಿಯ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಶುಕ್ರವಾರ ತಡರಾತ್ರಿ ಸುದೀಪ್ ಹಬ್ಬವೇ ನಡೆದಿದೆ. ಬೃಹತ್ ವೇದಿಕೆಗೆ ಎಂಟ್ರಿ ಕೊಟ್ಟ ನೆಚ್ಚಿನ ನಟನಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಇದೇ ವೇಳೆ ಮ್ಯಾಕ್ಸ್ ಚಿತ್ರದ ಶೀರ್ಷಿಕೆ ಟೀಸರ್ ರಿಲೀಸ್ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...