alex Certify ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊತ್ತಂಬರಿ ಬೀಜʼ ಹೀಗೆ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ.

ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು ಲೋಟ ನೀರು ಬೆರೆಸಿ 10 ನಿಮಿಷ ಕುದಿಸಿ ಬಳಿಕ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ದೂರವಾಗುತ್ತದೆ.

ಕೊತ್ತಂಬರಿಯನ್ನು ಪುಡಿ ಮಾಡಿ 6 ಲೋಟ ನೀರನ್ನು ಕುದಿಸಿ ಮೂರು ಲೋಟಕ್ಕೆ ಇಳಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಮೂಲವ್ಯಾಧಿ ಸಮಸ್ಯೆಗೂ ಇದು ಹೇಳಿ ಮಾಡಿಸಿದ ಕಷಾಯ.

ದೇಹವನ್ನು ತಂಪುಗೊಳಿಸುವ ವಿಶೇಷ ಶಕ್ತಿ ಇದಕ್ಕಿದೆ. ಹಾಗಾಗಿ ಹಾಲಿಗೆ ಕೊತ್ತಂಬರಿ ನೀರನ್ನು ಹಾಕಿಯೂ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

ಕೊತ್ತಂಬರಿ ಬೀಜದ ಪುಡಿಗೆ ಒಂದು ತುಂಡು ಬೆಲ್ಲ ಹಾಕಿ ಕುದಿಸಿ ಕುಡಿಯುವುದರಿಂದ ಗರ್ಭಿಣಿಯರ ವಾಂತಿ, ವಾಕರಿಕೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...