alex Certify ನವರಾತ್ರಿಯಲ್ಲಿ ದುರ್ಗೆ ಕೃಪೆಗೆ ಪಾತ್ರರಾಗಲು ಮಾಡಿ ಈ ಸರಳ ʼಉಪಾಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ದುರ್ಗೆ ಕೃಪೆಗೆ ಪಾತ್ರರಾಗಲು ಮಾಡಿ ಈ ಸರಳ ʼಉಪಾಯʼ

ನವರಾತ್ರಿಯಲ್ಲಿ ತಾಯಿ ದುರ್ಗೆ ಕೃಪೆಗೆ ಪಾತ್ರರಾಗಲು ಭಕ್ತರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಉಪವಾಸ, ವೃತ, ದೇವಿ ಆರಾಧನೆ, ಪೂಜೆ ಹೀಗೆ 9 ದಿನಗಳ ಕಾಲ ದುರ್ಗೆ ಧ್ಯಾನದಲ್ಲಿರುತ್ತಾರೆ. ಈ ನವರಾತ್ರಿ ಸಂದರ್ಭದಲ್ಲಿ ನಾವು ಮಾಡುವ ಕೆಲವೊಂದು ಸುಲಭ ಉಪಾಯಗಳಿಂದಲೂ ತಾಯಿಯನ್ನು ಪ್ರಸನ್ನಗೊಳಿಸಬಹುದು.

ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಕಮಲಗಡ್ಡೆಯ ಮಾಲೆಯನ್ನು ಅರ್ಪಿಸಿ. ಇದ್ರಿಂದ ನಿಮ್ಮ ಸಮಸ್ಯೆ ದೂರವಾಗಲಿದೆ.

ಜೀವನದಲ್ಲಿ ಎಲ್ಲ ರೀತಿಯ ಸುಖ-ಶಾಂತಿಗಾಗಿ ದೇವಿಯ ದೇವಸ್ಥಾನಕ್ಕೆ ಹೋಗಿ ಸುಮಂಗಲಿ ಸಾಮಗ್ರಿಗಳನ್ನು ಅರ್ಪಿಸಿ. ಇದ್ರಿಂದ ನಿಮ್ಮ ಮನೋಕಾಮನೆಗಳು ಈಡೇರಲಿವೆ.

ನವರಾತ್ರಿಯಲ್ಲಿ ಪ್ರತಿ ರಾತ್ರಿ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದ್ರಿಂದ ಸುಖ-ಶಾಂತಿ ನೆಲೆಸಿರುತ್ತದೆ.

ನವರಾತ್ರಿಯಂದು ಬಡ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ಭೋಜನ ನೀಡಿ. ಇದ್ರಿಂದ ಎಲ್ಲ ಸಮಸ್ಯೆ ದೂರವಾಗುತ್ತದೆ.

ತಾಯಿ ದುರ್ಗೆಗೆ ಹಸುವಿನ ಹಾಲಿನ ಅಭಿಷೇಕ ಮಾಡಿದ್ರೆ ಮನೆಯಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಶಾಂತಿ ನೆಲೆಸುತ್ತದೆ.

ಸುಖಕರ ದಾಂಪತ್ಯ ಜೀವನಕ್ಕಾಗಿ ನವರಾತ್ರಿಯಂದು ಶಿವ-ಪಾರ್ವತಿ ಪೂಜೆಯನ್ನು ಒಟ್ಟಿಗೆ ಮಾಡಿ.

ನವರಾತ್ರಿಯಲ್ಲಿ ತಾಯಿ ದುರ್ಗೆ ಪೂಜೆಯನ್ನು ಕೆಂಪು ಹೂವಿನಿಂದ ಮಾಡಬೇಕು. ಇದ್ರಿಂದ ನಿಂತ ಕಾರ್ಯ ಪೂರ್ಣಗೊಳ್ಳುತ್ತದೆ. ಇದನ್ನು ಪ್ರತಿದಿನ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...