alex Certify ಕಾಯಿಲೆಗಳಿಲ್ಲದೇ ಸಂಪೂರ್ಣ ಫಿಟ್‌ ಆಗಿರಲು ಪ್ರತಿದಿನ ಮಾಡಿ ಈ ಸುಲಭದ ಕೆಲಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆಗಳಿಲ್ಲದೇ ಸಂಪೂರ್ಣ ಫಿಟ್‌ ಆಗಿರಲು ಪ್ರತಿದಿನ ಮಾಡಿ ಈ ಸುಲಭದ ಕೆಲಸ….!

ಪ್ರತಿಯೊಬ್ಬರಿಗೂ ಟೆನ್ಷನ್‌, ಒತ್ತಡ ಇವೆಲ್ಲ ಸಾಮಾನ್ಯ. ಕೆಲವೊಂದು ತಪ್ಪು ಅಭ್ಯಾಸಗಳಿಂದಲೂ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಇವೆಲ್ಲ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ  ದೇಹದಲ್ಲಿ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗತೊಡಗುತ್ತದೆ. ರಕ್ತನಾಳಗಳಲ್ಲಿ ಪ್ಲೇಕ್ ರೂಪುಗೊಳ್ಳುತ್ತದೆ. ನೀವು ಆರೋಗ್ಯವಾಗಿರಲು ಬಯಸಿದರೆ  ಪ್ರತಿದಿನ ಬೆಳಗ್ಗೆ ಮುಕ್ತವಾಗಿ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮುಕ್ತವಾಗಿ ನಗುವುದರಿಂದ ಸಾಕಷ್ಟು ಪ್ರಯೋಜನಳಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ – ಪ್ರತಿದಿನ ಮುಕ್ತವಾಗಿ ನಗುತ್ತಿದ್ದರೆ ಅದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಬಹಿರಂಗವಾಗಿ ನಗುವುದರಿಂದ ದೇಹದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚುತ್ತದೆ ಮತ್ತು ಆಮ್ಲಜನಕವು ಎಲ್ಲಾ ಅಂಗಗಳಿಗೆ ಸರಿಯಾಗಿ ತಲುಪುತ್ತದೆ. ಇದರಿಂದಾಗಿ ದೇಹದ ಪ್ರತಿಯೊಂದು ಭಾಗವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗದಂತೆ ಕಾಪಾಡಿಕೊಳ್ಳಲು ಮುಕ್ತವಾಗಿ ನಗಬೇಕು. ಯಾವಾಗಲೂ ಸಂತೋಷವಾಗಿರಬೇಕು.

ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ – ಮುಕ್ತವಾಗಿ ನಗುತ್ತಿದ್ದರೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ನಗುವಾಗ ನಾವು ಆಳವಾದ ಉಸಿರನ್ನು ತೆಗೆದುಕೊಳ್ಳುತ್ತೇವೆ. ಇದು ದೇಹದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ.

ಬಿಪಿ ನಿಯಂತ್ರಣನಗು ಬಿಪಿಯನ್ನು ನಿಯಂತ್ರಣದಲ್ಲಿಡುತ್ತದೆ. ಏಕೆಂದರೆ ನಗುವುದರಿಂದ ನಮ್ಮ ಮೂಡ್ ಸುಧಾರಿಸುತ್ತದೆ. ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ನೀವು ಬಿಪಿ ರೋಗಿಗಳಾಗಿದ್ದರೆ ಮುಕ್ತವಾಗಿ ನಗಲು ಪ್ರಯತ್ನಿಸಿ.

ತೂಕ ನಿಯಂತ್ರಣ – ನಗುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಕಾರ್ಟಿಸೋಲ್ ಹಾರ್ಮೋನ್ ನಿಯಂತ್ರಣಕ್ಕೆ ಬರುತ್ತದೆ. ಆತಂಕವನ್ನೂ ನಗು ನಿವಾರಿಸಬಲ್ಲದು. ಕಾರ್ಟಿಸೋಲ್ ನಿಯಂತ್ರಣದಲ್ಲಿದ್ದಾಗ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...