alex Certify ಸಮುದ್ರ ತಳದಲ್ಲಿ ಬರೋಬ್ಬರಿ 900-ವರ್ಷ ಹಳೆಯ ಖಡ್ಗ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರ ತಳದಲ್ಲಿ ಬರೋಬ್ಬರಿ 900-ವರ್ಷ ಹಳೆಯ ಖಡ್ಗ ಪತ್ತೆ

Diver discovers 900-year-old sword dating to the Crusades

ಕ್ರುಸೇಡರ್‌ ಚಕ್ರವರ್ತಿಯೊಬ್ಬನಿಗೆ ಸೇರಿದ್ದು ಎನ್ನಲಾದ, 900-ವರ್ಷ ಹಳೆಯದ ಖಡ್ಗವೊಂದನ್ನು ಮೆಡಿಟರೇನಿಯನ್ ಸಮುದ್ರದ ತಳದಿಂದ ಇಸ್ರೇಲ್‌ನ ಡೈವರ್‌ ಒಬ್ಬರು ಹೊರಗೆ ತೆಗೆದಿದ್ದಾರೆ.

ಶ್ಲೋಮಿ ಕಟ್ಜಿನ್ ಹೆಸರಿನ ಈತ ತನ್ನ ಕ್ಯಾಮೆರಾವನ್ನು ಸಮುದ್ರದಾಳದಲ್ಲಿ ರೋಲಿಂಗ್ ಮಾಡುತ್ತಿದ್ದ ವೇಳೆ ಸಮುದ್ರದ ತಳದಲ್ಲಿ ಈ ಖಡ್ಗ ಕಣ್ಣಿಗೆ ಬಿದ್ದಿದೆ. ಇಸ್ರೇಲ್‌ ಕರಾವಳಿಯ ತೀರದಲ್ಲಿ ಈ ಶೋಧವಾಗಿದೆ.

ಈತನ ಬಳಿ ಇವೆ 12,000 ಕ್ಕೂ ಅಧಿಕ ವಿಎಚ್‌ಎಸ್ ಟೇಪ್

ಖಡ್ಗದೊಂದಿಗೆ ಇನ್ನಷ್ಟು ಹೆಚ್ಚಿನ ಪ್ರಾಚೀನ ವಸ್ತುಗಳು ಸಮುದ್ರದ ತಳದಲ್ಲಿ ಸಿಕ್ಕಿವೆ. ಖಡ್ಗವನ್ನು ಬಾರ್ನಕಲ್‌ಗಳು ಆವರಿಸಿಕೊಂಡಿದ್ದು, ಇಸ್ರೇಲ್‌ನ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.

ಸೆರಾಮಿಕ್ ಚೂರುಗಳೊಂದಿಗೆ 130 ಸೆಂಮೀ ಉದ್ದದ ಖಡ್ಗವನ್ನು ಕಟ್ಜಿನ್‌ ಹಿಡಿದಿರುವ ಫುಟೇಜ್ ವೈರಲ್ ಆಗಿದೆ.

ಈ ಎಲ್ಲಾ ವಸ್ತುಗಳನ್ನು ಅವುಗಳ ಅಸಲಿ ರೂಪಕ್ಕೆ ಪರಿವರ್ತಿಸಿ ಪ್ರದರ್ಶನಕ್ಕೆ ಇಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...