alex Certify ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ದೀಪಿಕಾ ಕುಟುಂಬ ಸದಸ್ಯರ ಹೆಸರಿನಲ್ಲಿದೆ ಈ ʼಸಾಮ್ಯತೆʼ

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ʼಐಶ್ವರ್ಯʼ ಚಿತ್ರದೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿ, ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಮತ್ತು ಆಕೆಯ ಮನೆಯವರ ಹೆಸರಿನಲ್ಲಿ ಒಂದು ವಿಶೇಷವಿದೆ.

ಅವರ ಮನೆತನದ ಹೆಸರು – ಪಡುಕೋಣೆ ಬಿಟ್ಟು ಇನ್ನೊಂದರಲ್ಲಿ ಸ್ವಾಮ್ಯತೆಯಿದೆ. ಅದು ಏನಂತೀರಾ..? ಅದೇ ಬೆಳಕು !

ಹೇಗೆ ಅಂತ ಆಶ್ಚರ್ಯವಾಗಿದ್ದಲ್ಲಿ ಮುಂದೆ ಓದಿ. ಎಲ್ಲರಿಗೂ ತಿಳಿದಿರುವಂತೆ, ದೀಪಿಕಾಳ ಹೆಸರಲ್ಲಿ ದೀಪವಿದೆ, ದೀಪ ಎಂದರೆ ಬೆಳಕು. ಈಕೆಯ ತಂದೆ – ಪ್ರಕಾಶ ಪಡುಕೋಣೆ ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ.

ಅವರ ಹೆಸರಲ್ಲೂ ಬೆಳಕಿದೆ, ದೀಪಿಕಾಳ ತಾಯಿ ಹೆಸರು ಉಜ್ಜಲ, ಇದು ಕೂಡ ಬೆಳಕೇ ಆಗಿದೆ. ಹಾಗೆ ದೀಪಿಕಾಳ ತಂಗಿ ಅನಿಷಾ, ಅದರ ಅರ್ಥ ಕತ್ತಲನ್ನು ಸೀಳಿಕೊಂಡು ಬರುವ ಬೆಳಕು.

ಅತ್ಯಂತ ಬೇಡಿಕೆಯ ನಟಿ ದೀಪಿಕಾ, ಪ್ರಸ್ತುತ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ʼಪಠಾಣ್ʼ ಹೆಸರಿನ ಸಿನೆಮಾ ಹಾಗೂ ಹೃತಿಕ್ ರೋಷನ್ ಅವರೊಂದಿಗೆ ʼಫೈಟರ್ʼ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಇದಲ್ಲದೇ, ಶಕುನ್ ಬಾತ್ರಾ ಅವರ ಹೆಸರಿಟ್ಟಿಲ್ಲದ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ಸಿದ್ಧಾಂತ ಚತುರ್ವೇದಿ ಜೊತೆ ಮತ್ತು ನಾಗ್ ಅಶ್ವಿನ್ ಅವರ ʼಇಂಟರ್ನ್ʼ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಹಾಗು ಪ್ರಭಾಸ್ ಜೊತೆ ಕೂಡ ನಟಿಸುತ್ತಿದ್ದಾರೆ.

ಇಂಟರ್ನ್ – ಹಾಲಿವುಡ್ ಚಿತ್ರದ ರಿಮೇಕ್ ಆಗಿದ್ದು, ರಿಷಿ ಕಪೂರ್ ನಟಿಸಬೇಕಿದ್ದು, ಅವರ ನಿಧನದ ನಂತರ ಅವರ ಪಾತ್ರವನ್ನು ಅಮಿತಾಬ್ ಬಚ್ಚನ್ ಮಾಡುತ್ತಿರುವುದು ವಿಶೇಷವಾಗಿದೆ.

73 ವರ್ಷದ ವೃದ್ಧನ ಸ್ಕೇಟ್ ಬೋರ್ಡ್ ಆಟ ನೋಡಿ ನೆಟ್ಟಿಗರು ಶಾಕ್..! ವಿಡಿಯೋ ವೈರಲ್

ಸದ್ಯಕ್ಕೆ, ದೀಪಿಕಾ ಕಬೀರ್ ಖಾನ್ ಅವರ ʼ83ʼ ಚಿತ್ರ ಬಿಡುಗಡೆಗೆ ಕಾಯುತ್ತಿದ್ದು, ಕ್ರಿಕೆಟಿಗ ಕಪಿಲ್ ದೇವ್ ಅವರ ಜೀವನಕತೆ ಆಧಾರಿತ ಈ ಸಿನೆಮಾದಲ್ಲಿ ಈಕೆಯ ಪತಿ ರಣವೀರ್ ಸಿಂಗ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಸಹ ನಿರ್ಮಾಪಕಿಯಾಗಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...