alex Certify ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳು ಆಗಿದೆ.

ಈ ನಡುವೆ ಮಾನವೀಯತೆ, ದಯಾಗುಣಗಳಿಗೆ ಕೈಗನ್ನಡಿ ಎಂಬಂತಹ ಕತೆಗಳು ಸಹ ಬೆಳಕಿಗೆ ಬರ್ತಾನೇ ಇದೆ. ಇದೇ ರೀತಿಯ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರು ತಾವು ಹೇಗೆ ಮನೆಗೆಲಸದಾಕೆ ತನ್ನ ಪುತ್ರಿಗೆ ಲ್ಯಾಪ್​ಟಾಪ್​ ಕೊಡಿಸುವಲ್ಲಿ ನೆರವಾದೆವು ಅನ್ನೋದನ್ನ ವಿವರಿಸಿದ್ದು ಈ ಕತೆ ಓದಿದ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಸರಣಿ ಟ್ವೀಟ್​ಗಳ ಮೂಲಕ ಗೌರವ್​ ಎಂಬವರು ಈ ಕತೆಯನ್ನ ವಿವರಿಸಿದ್ದಾರೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದಾಕೆ ಒಮ್ಮೆ ಸ್ವಲ್ಪ ಹಣವನ್ನ ಹಿಡಿದುಕೊಂಡು ಬಂದು ತಮ್ಮ ಮಗಳಿಗೆ ಲ್ಯಾಪ್​ಟಾಪ್​ ಖರೀದಿ ಮಾಡಲು ಸಹಾಯ ಮಾಡಿ ಎಂದು ಕೇಳಿದ್ದರು. ಈಕೆಯ ಪುತ್ರಿ ಏರ್​ ಹೋಸ್ಟ್ ತರಗತಿಗೆ ಹಾಜರಾಗಬೇಕಾದ್ದರಿಂದ ಲ್ಯಾಪ್​ ಟಾಪ್​ ಖರೀದಿ ಮಾಡೋದು ಅನಿವಾರ್ಯವಾಗಿತ್ತು.

ಆದರೆ ಮನೆಗೆಲಸದಾಕೆ ಕೂಡಿಟ್ಟ ಹಣಕ್ಕಿಂತ ಹೆಚ್ಚಿನ ಮೊತ್ತ ಲ್ಯಾಪ್​ಟಾಪ್​ ಖರೀದಿಗೆ ಬೇಕಾಗಿತ್ತು. ಮನೆಗೆಲಸದಾಕೆಯ ಕಷ್ಟಕ್ಕೆ ನೆರವಾದ ಗೌರವ್​ ಹೆಚ್ಚಿನ ಹಣವನ್ನ ತಾವೇ ನೀಡಿ ಲ್ಯಾಪ್​ಟಾಪ್​ ಖರೀದಿಸಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮನೆಗೆಲಸದಾಕೆ ಪ್ರತಿ ತಿಂಗಳು ನನ್ನ ಸಂಬಳದಲ್ಲಿ 1 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದರೆ ಇದಕ್ಕೆ ಗೌರವ್​ ಒಪ್ಪಿಗೆ ನೀಡದೇ ಮಾನವೀಯತೆ ಮೆರೆದಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...