alex Certify ವಿಚ್ಛೇದನದ ನಂತರ ಜೀವನಾಂಶ ಕೇಳುವ ಮಹಿಳೆಯರು ನಾಚಿಕೊಳ್ಬೇಕಾಗಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನದ ನಂತರ ಜೀವನಾಂಶ ಕೇಳುವ ಮಹಿಳೆಯರು ನಾಚಿಕೊಳ್ಬೇಕಾಗಿಲ್ಲ

ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಜೋಡಿ ಬೇರೆಯಾಗಲು ನಿರ್ಧರಿಸುತ್ತಾರೆ. ವಿಶ್ವದ ಉಳಿದ ದೇಶಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಿದೆ. ಭಾರತದಲ್ಲಿ ಹಿಂದೆ ವಿಚ್ಛೇದನ ಪ್ರಕರಣ ತುಂಬಾ ಕಡಿಮೆಯಿತ್ತು. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲೂ ವಿಚ್ಛೇದನ ಪ್ರಕರಣ ಹೆಚ್ಚಾಗಿದೆ. ವಿಚ್ಛೇದನ ನಂತ್ರ ಮಹಿಳೆಯರು ಜೀವನಾಂಶ ಕೇಳ್ತಾರೆ. ಆದ್ರೆ ಜೀವನಾಂಶ ಕೇಳುವ ಮಹಿಳೆಯರನ್ನು ಸ್ವಾರ್ಥಿಗಳೆಂದು ದೂರಲಾಗುತ್ತದೆ.

ಸಿದ್ಧಾರ್ಥ್​ ಶುಕ್ಲಾ ಸಾವಿನ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ಶೆಹನಾಜ್​

ಸಮಾಜಕ್ಕೆ ಭಯಬಿದ್ದು, ಜೀವನಾಂಶಕ್ಕಾಗಿ ಮಹಿಳೆಯರು ಹಿಂದೇಟು ಹಾಕಬೇಕಾಗಿಲ್ಲ. ಮಹಿಳೆಯರ ವಿಷಯದಲ್ಲಿ ವಿಚ್ಛೇದನ ಸವಾಲಿನ ಸಂಗತಿ. ವಿಚ್ಛೇನದ ಪಡೆಯದಂತೆ ಮಹಿಳೆಯನ್ನು ಮನವೊಲಿಸಲಾಗುತ್ತದೆ. ಸಮಾಜವಾಗಲಿ, ಕುಟುಂಬವಾಗಲಿ ಇದನ್ನು ಒಪ್ಪುವುದಿಲ್ಲ. ವಿಚ್ಛೇದನ ಪಡೆದ ಮಹಿಳೆಯರು ಅನೇಕ ಸಮಸ್ಯೆ ಎದುರಿಸುತ್ತಾರೆ. ವಿಚ್ಛೇದನದ ನಂತ್ರ ಜೀವನಾಂಶ ಪಡೆಯುವ ಮಹಿಳೆಯರು ಸಂವಿಧಾನ ಪುಟದಲ್ಲಿ ಏನಿದೆ ಎಂಬುದನ್ನು ತಿಳಿಯಬೇಕು. ವಿಚ್ಛೇದನದ ನಂತರ ಆರ್ಥಿಕ ಬೆಂಬಲ ನೀಡಿ ಮಹಿಳೆ ಸ್ವಾತಂತ್ರ್ಯ ಮತ್ತು ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುತ್ತದೆ.  ಅನೇಕ ಮಹಿಳೆಯರು ಇದನ್ನು ಕೇಳಲು ಹಿಂಜರಿಯುತ್ತಾರೆ. ಮದುವೆಗೂ ಮುನ್ನ ಕೆಲಸ ಮಾಡುವ ಮಹಿಳೆಯರು ಮದುವೆಯ ನಂತರ ತಮ್ಮ ಉದ್ಯೋಗವನ್ನು ತೊರೆಯುತ್ತಾರೆ.

ನಿದ್ದೆ ಮಾಡುವಾಗ ನಗು ಬರೋದು ಏಕೆ….?

ಅಂಕಿಅಂಶಗಳ ಪ್ರಕಾರ, 2005 ಮತ್ತು 2012 ರ ನಡುವೆ 20 ಮಿಲಿಯನ್ ಮಹಿಳೆಯರು ತಮ್ಮ ಉದ್ಯೋಗವನ್ನು ಬಿಟ್ಟಿದ್ದಾರೆ. ಇವರಲ್ಲಿ ಸುಮಾರು ಶೇಕಡಾ 65ರಷ್ಟು ಮಹಿಳೆಯರು ಮದುವೆ ನಂತರ ಮತ್ತೆ ಉದ್ಯೋಗ ಪಡೆದಿಲ್ಲ. ಇಂತಹ ಸಂದರ್ಭಗಳಲ್ಲಿ ಜೀವನಾಂಶ ವಿಚ್ಛೇದನದ ನಂತರ ಆರ್ಥಿಕವಾಗಿ ಸಬಲರಾಗಿ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ವಿಚ್ಛೇದನದ ನಂತರ ಮಹಿಳೆಯರು ಜೀವನಾಂಶ ಪಡೆಯಬೇಕು.

ಹಿಂದೂ ವಿವಾಹ ಕಾಯಿದೆ 1965 ರ ಪ್ರಕಾರ, ಹೆಂಡತಿ ಗಂಡನಿಗಿಂತ ಹೆಚ್ಚು ಸಂಪಾದಿಸಿದರೆ ಅಥವಾ ಗಂಡನಿಗೆ ಹಣ ಗಳಿಸಲು ಸಾಧ್ಯವಾಗದಿದ್ದರೆ, ಆತ ಕೂಡ ಜೀವನಾಂಶ ಕೇಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...