alex Certify ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಳಿದ ಅನ್ನದಿಂದ ಮಾಡಿ ರುಚಿ ರುಚಿ ಲೆಮನ್ ಟೊಮೊಟೊ ರೈಸ್

ರಾತ್ರಿ ಉಳಿದ ಅನ್ನವನ್ನು ಏನು ಮಾಡ್ಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ಉಳಿದ ಅನ್ನದಿಂದ ರುಚಿ ರುಚಿ ಲೆಮನ್ ಟೊಮೊಟೊ ರೈಸ್ ಮಾಡಬಹುದು.

ಲೆಮನ್ ಟೊಮೊಟೊ ರೈಸ್ ಮಾಡಲು ಬೇಕಾಗುವ ಪದಾರ್ಥ :

ಉಳಿದ ಅನ್ನ – 1 ಕಪ್

ಟೊಮೆಟೊ – 2 ಕಪ್

ಈರುಳ್ಳಿ – 2

ಬಟಾಣಿ – 1/4 ಕಪ್

ಕ್ಯಾರೆಟ್ – 1 ಕಪ್

ಲವಂಗ – 1-2

ಸ್ವೀಟ್ ಕಾರ್ನ್ – 1 ಕಪ್

ಕಡಲೆಕಾಯಿ – 1/2  ಕಪ್

ಶುಂಠಿ – 1 ತುಂಡು

ಅರಿಶಿನ – 1 ಚಮಚ

ಕೆಂಪು ಮೆಣಸಿನ ಪುಡಿ – 1 ಚಮಚ

ಎಣ್ಣೆ ಅಗತ್ಯಕ್ಕೆ ತಕ್ಕಷ್ಟು

ರುಚಿಗೆ ಉಪ್ಪು

ಲೆಮನ್ ಟೊಮೊಟೊ ರೈಸ್ ಮಾಡುವ ವಿಧಾನ :

ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಲವಂಗ, ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಶುಂಠಿ ಹಾಕಿ ಫ್ರೈ ಮಾಡಿ. ಕ್ಯಾರೆಟ್, ಬಟಾಣಿ, ಕಡಲೆಕಾಯಿ ಮತ್ತು ಸ್ವೀಟ್ ಕಾರ್ನ್ ಸೇರಿಸಿ 2 ನಿಮಿಷ ಬೇಯಿಸಿ. ನಂತರ ಟೊಮ್ಯಾಟೊ ಸೇರಿಸಿ ಫ್ರೈ ಮಾಡಿ. ನಂತ್ರ ಬೇಯಿಸಿಟ್ಟ ಅನ್ನವನ್ನು ಹಾಕಿ, ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...