alex Certify ರಸ್ತೆಯಲ್ಲಿ ನಮಾಜ್ ಮಾಡುವಾಗ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ: ಭಾರೀ ಆಕ್ರೋಶ ಬೆನ್ನಲ್ಲೇ ತನಿಖೆಗೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯಲ್ಲಿ ನಮಾಜ್ ಮಾಡುವಾಗ ಕಾಲಿನಿಂದ ಒದ್ದ ಪೊಲೀಸ್ ಅಧಿಕಾರಿ: ಭಾರೀ ಆಕ್ರೋಶ ಬೆನ್ನಲ್ಲೇ ತನಿಖೆಗೆ ಆದೇಶ

ನವದೆಹಲಿ: ಶುಕ್ರವಾರದ ಪ್ರಾರ್ಥನೆಯ ವೇಳೆ ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಮುಸ್ಲಿಂ ಪುರುಷರನ್ನು ಪೊಲೀಸ್ ಅಧಿಕಾರಿಯೊಬ್ಬರು ಒದ್ದ ಘಟನೆ ದೆಹಲಿಯಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ವಿಡಿಯೋ ಹೊರಬಿದ್ದ ನಂತರ ಅಧಿಕಾರಿಗಳು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇಂದರ್‌ ಲೋಕ್ ಪ್ರದೇಶದ ಮಸೀದಿಯಲ್ಲಿ ಜನಸಂದಣಿ ಉಂಟಾದ ಪರಿಣಾಮವಾಗಿ ಕೆಲವು ಪುರುಷರು ರಸ್ತೆಯ ಮೇಲೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆ ನಡೆಯುತ್ತಿರುವಾಗಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳ ಗುಂಪು ನಾಮಜ್ ಮಾಡುವವರನ್ನು ಅಲ್ಲಿಂದ ಚದುರಿಸಲು ಯತ್ನಿಸಿತು. ಘಟನೆಯನ್ನು ಸೆರೆಹಿಡಿಯುವ ವೀಡಿಯೋದಲ್ಲಿ ಅಧಿಕಾರಿಯೊಬ್ಬರು ಪ್ರಾರ್ಥನೆಯಲ್ಲಿದ್ದ ಪುರುಷರನ್ನು ಹೊಡೆಯುವುದನ್ನು ತೋರಿಸಿದೆ.

ಈ ಘಟನೆಯು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜನಸಮೂಹವು ಪೊಲೀಸ್ ಅಧಿಕಾರಿಯನ್ನು ಸುತ್ತುವರೆದು ಅವರ ಕ್ರಮಗಳ ವಿರುದ್ಧ ಪ್ರತಿಭಟಿಸಿದೆ. ಉಪ ಪೊಲೀಸ್ ಆಯುಕ್ತ(ಉತ್ತರ) ಎಂ.ಕೆ. ಮೀನಾ ಅವರು ಘಟನೆಯನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪಘರ್ಹಿ ಅವರು ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ನಮಾಜ್ ಮಾಡುವಾಗ ವ್ಯಕ್ತಿಯನ್ನು ಒದೆಯುವುದು ಬಹುಶಃ ಮಾನವೀಯತೆಯ ಮೂಲ ತತ್ವಗಳನ್ನು ಅರ್ಥಮಾಡಿಕೊಂಡಂತಿಲ್ಲ. ಈ ಪೊಲೀಸ್ ಹೃದಯದಲ್ಲಿ ತುಂಬಿರುವ ದ್ವೇಷವೇನು? ಈ ಅಧಿಕಾರಿಯ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಮತ್ತು ಅವರನ್ನು ವಜಾಗೊಳಿಸುವಂತೆ ದೆಹಲಿ ಪೊಲೀಸರಿಗೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...